2024 | ಸೂಪರ್‌ಜೈಂಟ್‌ಗೆ ಶ್ರೀಧರನ್‌ ಲಖನೌ : ಶ್ರೀಧರನ್ ಶ್ರೀರಾಮ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಲಖನೌ ಸೂಪರ್ ಜೈಂಟ್ಸ್‌ ತಂಡದ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ಮುಂದಿನ ವರ್ಷದ ಲೀಗ್‌ ವೇಳೆಗೆ ಅವರು ಕಾರ್ಯಾರಂಭ ಮಾಡುವರು. ಪ್ರಸ್ತುತ ತಂಡದಲ್ಲಿ ಜಸ್ಟಿಂಗ್ ಲ್ಯಾಂಗರ್ (ಮುಖ್ಯ ಕೋಚ್), ಗೌತಮ್ ಗಂಭೀರ್ (ಮೆಂಟರ್), ವಿಜಯ್ ದಹಿಯಾ (ಸಹಾಯಕ ಕೋಚ್), ಪ್ರವೀಣ ತಾಂಬೆ (ಸ್ಪಿನ್ ಬೌಲಿಂಗ್ ಕೋಚ್), ಮಾರ್ನಿ ಮಾರ್ಕೆಲ್ (ವೇಗದ ಬೌಲಿಂಗ್ ಕೋಚ್) ಹಾಗೂ ಜಾಂಟಿ ರೋಡ್ಸ್ (ಫೀಲ್ಡಿಂಗ್ ಕೋಚ್) ಇದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.