ಭಾರತದ ಪರ ಅತಿ ಹೆಚ್ಚು ರನ್; ದ್ರಾವಿಡ್ ದಾಖಲೆ ಮುರಿದ ಕೊಹ್ಲಿ ಹೈದರಾಬಾದ್: 'ದಿ ವಾಲ್' ಖ್ಯಾತಿಯ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿರುವ 'ರನ್ ಮೆಶಿನ್' ಖ್ಯಾತಿಯ ವಿರಾಟ್ ಕೊಹ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಈ ಮೂಲಕ ದಿಗ್ಗಜ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಇದುವರೆಗೆ 471 ಪಂದ್ಯಗಳಲ್ಲಿ (525 ಇನ್ನಿಂಗ್ಸ್) 53.62ರ ಸರಾಸರಿಯಲ್ಲಿ ಒಟ್ಟು 24,078 ರನ್ ಗಳಿಸಿದ್ದಾರೆ. ಇದರಲ್ಲಿ 71 ಶತಕ ಹಾಗೂ 125 ಅರ್ಧಶತಕಗಳು ಸೇರಿವೆ. ಇದನ್ನೂ ಓದಿ:ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆ ಬರೆದ ಭಾರತ ಟೀಮ್ ಇಂಡಿಯಾದ ಕೋಚ್ ದ್ರಾವಿಡ್ ಭಾರತದ ಪರ 24,064 ರನ್ ಪೇರಿಸಿದ್ದರು. ಏಷ್ಯಾ ಇಲೆವೆನ್, ಐಸಿಸಿ ವರ್ಲ್ಡ್ ಇಲೆವೆನ್ ತಂಡಗಳ ಪರವಾಗಿಯೂ 144 ರನ್ ಗಳಿಸಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 24,208 ರನ್ ಹೊಂದಿದ್ದಾರೆ. ಇದನ್ನೂ ಓದಿ:ಭಾರತ ಆಸ್ಟ್ರೇಲಿಯಾ ಟಿ20: ರೋಹಿತ್ ಪಡೆಗೆ ಸರಣಿ ಕಿರೀಟ @ 👏👏 33rd T20Is. - ://./xVrzo7lhd3 # @ ../zuqfc1xvbb ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸಚಿನ್, 664 ಪಂದ್ಯಗಳಲ್ಲಿ (782 ಇನ್ನಿಂಗ್ಸ್) 48.52ರ ಸರಾಸರಿಯಲ್ಲಿ 34,357 ರನ್ ಪೇರಿಸಿದ್ದಾರೆ. ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (63) ಗಳಿಸಿದ ವಿರಾಟ್, ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದರು. ವೈಟ್ ಬಾಲ್ ಕ್ರಿಕೆಟ್‌ನಲ್ಲಿ (ಏಕದಿನ ಹಾಗೂ ಟ್ವೆಂಟಿ-20) 16,000 ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಹಿರಿಮೆಗೂ ಕೊಹ್ಲಿ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲೂ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿರುವ ಕೊಹ್ಲಿ, 369 ಪಂದ್ಯಗಳಲ್ಲಿ (352 ಇನ್ನಿಂಗ್ಸ್) 55.95ರ ಸರಾಸರಿಯಲ್ಲಿ 16,004 ರನ್ ಗಳಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ 44 ಶತಕ ಹಾಗೂ 97 ಅರ್ಧಶತಕ ಗಳಿಸಿದ್ದಾರೆ. 🗨️🗨️ : @ ▶️ ://./xVrzo737YV # | # ../7JlLTyDj6y ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.