ಟಿ20 ಕ್ರಿಕೆಟ್‌| ಕೊಹ್ಲಿಯ ಈ ವಿಶ್ವದಾಖಲೆ ಸರಿಗಟ್ಟಿದ್ದಾರೆ ಪಾಕ್‌ನ ಬಾಬರ್‌ ಅಜಂ ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 3,000 ರನ್ ಗಳಿಸಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವಿಶ್ವದಾಖಲೆಯನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಂ ಶುಕ್ರವಾರ ಸರಿಗಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಆರನೇ ಟಿ20 ಪಂದ್ಯದಲ್ಲಿ 87*(59) ರನ್ ಗಳಿಸಿದ ಸಂದರ್ಭ, ಬಾಬರ್ 3,000 ರನ್ ಗಡಿಯನ್ನು ದಾಟಿದರು. 27ರ ಹರೆಯದ ಬಾಬರ್‌ ಈ ಮೈಲಿಗಲ್ಲನ್ನು ತಲುಪಲು 81 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ವಿಶೇಷವೆಂದರೆ ಕೊಹ್ಲಿ ಕೂಡ 81 ಇನ್ನಿಂಗ್ಸ್‌ಗಳ ನೆರವಿನಿಂದಲೇ ಈ ಸಾಧನೆ ಮಾಡಿದ್ದರು. ಅಂದಹಾಗೆ, 3000 ರನ್‌ಗಳನ್ನು ಪೂರೈಸಿದ ಐದನೇ ಪುರುಷ ಆಟಗಾರ ಬಾಬರ್‌. ಒಟ್ಟಾರೆ, ಟಿ20 ಕ್ರಿಕೆಟ್‌ ರಂಗದಲ್ಲೇ ಈ ಮೈಲುಗಲ್ಲು ದಾಟಿದ 8ನೇ ಆಟಗಾರ. 🔥# | # ../HKLWgwK5J9 ಇವುಗಳನ್ನೂ ಓದಿ... ಈ ಸಮಯವೂ ಕಳೆದುಹೋಗುತ್ತದೆ..: ಕೊಹ್ಲಿ ಬೆಂಬಲಕ್ಕೆ ನಿಂತ ಪಾಕಿಸ್ತಾನ ನಾಯಕ ಬಾಬರ್ ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಅಜಮ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೊಹ್ಲಿ ವಿರಾಟ್ ಕೊಹ್ಲಿ ದಿವ್ಯಮಾನವ, ಅವರ ಶ್ರದ್ಧೆ ಅನುಕರಣೀಯ: ಶೇನ್ ವಾಟ್ಸನ್ ಕೊಹ್ಲಿ, ಬಾಬರ್ ಜೊತೆ ಕಟ್ಟಿಗೆ ತುಂಡುಗಳಿದ್ದರೂ ವಿಶ್ವಕಪ್ ಗೆಲ್ಲಬಹುದು: ಲತೀಫ್ ವಿಡಿಯೊ: ವಿರಾಟ್‌, ಬಾಬರ್‌ ಮತ್ತಿತರರ ಅಂದು ಮತ್ತು ಇಂದಿನ ಬ್ಯಾಟಿಂಗ್‌ ಶೈಲಿ ನೋಡಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.