2nd T20 | ಆಟದ ವೇಳೆ ಮೈದಾನಕ್ಕೆ ಬಂದ ಹಾವು ಗುವಾಹಟಿ (ಅಸ್ಸಾಂ): ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದ ವೇಳೆ ಮೈದಾನಕ್ಕೆ ಹಾವು ಪ್ರವೇಶಿಸಿದ್ದು, ಕೆಲ ಕಾಲ ಆಟವನ್ನು ನಿಲ್ಲಿಸಲಾಗಿತ್ತು. ಟಾಸ್‌ ಸೋತರೂ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿತು. ಪಂದ್ಯದ ಏಳನೇ ಓವರ್‌ನ ನಂತರ ಹಾವು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದೆ. ಕ್ರೀಡಾಂಗಣದ ಸಿಬ್ಬಂದಿ ಮೈದಾನಕ್ಕಿಳಿದು ಹಾವನ್ನು ಅಲ್ಲಿಂದ ದೂರಕ್ಕೆ ಅಟ್ಟಿದರು. ನಂತರ ಆಟವು ಪುನರಾರಂಭವಾಯಿತು. ಕ್ರಿಕೆಟ್ ಪಂದ್ಯವನ್ನು ಹಾವೊಂದು ನಿಲ್ಲಿಸಿದ್ದನ್ನು ನೋಡಿರಲಿಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. . ../ ಓದಿ...ಸೂರ್ಯಕುಮಾರ್‌ ಅಬ್ಬರ: ದ.ಆಫ್ರಿಕಾಕ್ಕೆ 238 ರನ್‌ ಕಠಿಣ ಗುರಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.