ಬಿಸಿಸಿಐ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ನೇಮಕ ಮುಂಬೈ:ಕರ್ನಾಟಕದ ರೋಜರ್‌ ಬಿನ್ನಿ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ)36ನೇ ಅಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. 67 ವರ್ಷದ ಬಿನ್ನಿ ಅವರನ್ನುಬಿಸಿಸಿಐ ಸರ್ವ ಸದಸ್ಯರ ಸಭೆಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಂಡಳಿಯ ಕಾರ್ಯದರ್ಶಿ ಆಗಿರುವ ಜಯ್‌ ಶಾ ಅವರೂ ಸತತ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೀವ್‌ ಶುಕ್ಲಾ, ಖಜಾಂಚಿ ಆಶೀಶ್‌ ಶೆಲಾರ್‌, ಜಂಟಿ ಕಾರ್ಯದರ್ಶಿಯಾಗಿ ದೇವಜಿತ್‌ ಸೈಕಿಯಾ ಅವರೂ ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ. ಭಾರತ ಪರ 27 ಟೆಸ್ಟ್‌, 72 ಏಕದಿನ ಪಂದ್ಯಗಳಲ್ಲಿ ಆಡಿರುವ ಬಿನ್ನಿ, 1983ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿಆಡಿದ್ದ ಎಂಟು ಪಂದ್ಯಗಳಲ್ಲಿ 18 ವಿಕೆಟ್‌ ಉರುಳಿಸಿ, ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿದ್ದರು. ಇದನ್ನೂ ಓದಿ:ಬಿಸಿಸಿಐ ಎಜಿಎಂ ಇಂದು: ರೋಜರ್ ಬಿನ್ನಿ ಆಯ್ಕೆಗೆ ವೇದಿಕೆ ಸಜ್ಜು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.