: ದೀಪಾವಳಿ ಶುರು... ಎಂದು ಭಾರತದ ಜಯವನ್ನು ಸಂಭ್ರಮಿಸಿದ ಅಮಿತ್ ಶಾ ನವದೆಹಲಿ: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು. ಭಾರತದ ರೋಚಕ ಜಯದ ಬಗ್ಗೆ ಸಂಭ್ರಮಿಸಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೀಪಾವಳಿ ಶುರು.... ಎಂದಿದ್ದಾರೆ. ಟಿ–ಟ್ವೆಂಟಿಯ ವಿಶ್ವಕಪ್‌ಗೆ ಅದ್ಭುತ ಆರಂಭ, ಇಂತಹ ಉಡುಗೊರೆ ಮೂಲಕ ದೀಪಾವಳಿ ಹಬ್ಬ ಶುರುವಾಗಿದೆ. ವಿರಾಟ್ ಕೊಹ್ಲಿ ಅವರಿಂದ ಎಂತಹ ಅದ್ಭುತ ಇನ್ನಿಂಗ್ಸ್‌ ಎಂದು ಶಾ ಬಣ್ಣಿಸಿದ್ದಾರೆ. 53 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್‌ ಬಾರಿಸಿದರು. ಮೊದಲ 50 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡ ಅವರು, ನಂತರದ 32 ರನ್‌ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದರು. ಪಾಕ್ ಎದುರು ಭಾರತಕ್ಕೆ ರೋಚಕ ಜಯ: ಕೊಹ್ಲಿಯನ್ನು ಹೊತ್ತು ಕುಣಿದ ರೋಹಿತ್ ಶರ್ಮಾ ಪಾಕ್ ಎದುರು ಜಯ ತಂದುಕೊಟ್ಟ ಪತಿ ವಿರಾಟ್ ಕುರಿತು ಭಾವುಕ ಸಂದೇಶ ಹಂಚಿಕೊಂಡ ಅನುಷ್ಕಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.