T20 : ಕೋವಿಡ್ ಇದ್ದರೂ ಶ್ರೀಲಂಕಾ ಎದುರು ಕಣಕ್ಕಿಳಿದ ಐರ್ಲೆಂಡ್‌ ಆಟಗಾರ ಹೋಬರ್ಟ್‌: ಐರ್ಲೆಂಡ್‌ ತಂಡದ ಆಲ್‌ರೌಂಡರ್‌ ಜಾರ್ಜ್‌ ಡಾಕ್ರೆಲ್‌ ಅವರು ಕೋವಿಡ್ ಪಾಸಿಟಿವ್‌ ಇದ್ದರೂಭಾನುವಾರ ನಡೆದ ಶ್ರೀಲಂಕಾವಿರುದ್ಧದ ಪಂದ್ಯದಲ್ಲಿ ಆಡಿದರು. ಐಸಿಸಿಯ ಹೊಸ ಮಾರ್ಗಸೂಚಿಯ ಪ್ರಕಾರ ಕೋವಿಡ್‌ ಪಾಸಿಟಿವ್‌ ಇದ್ದ ಆಟಗಾರರಿಗೆ ಆಡಲು ಅವಕಾಶ ನೀಡಲಾಗಿದೆ. ‘ಡಾಕ್ರೆಲ್‌ಗೆ ಕೋವಿಡ್‌ ಇದ್ದರೂ, ಸೌಮ್ಯ ಲಕ್ಷಣಗಳಷ್ಟೇ ಹೊಂದಿದ್ದರು. ಆದ್ದರಿಂದ ಐಸಿಸಿ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಆಡಿದರು’ ಎಂದು ವಿಶ್ವಕಪ್‌ನ ಅಧಿಕೃತ ವೆಬ್‌ಸೈಟ್‌ ಹೇಳಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 128 ರನ್‌ ಗಳಿಸಿತು. ಸಾಧಾರಣ ಮೊತ್ತ ಬೆನ್ನತ್ತಿದಲಂಕಾ ಪಡೆ,ಇನ್ನೂ ಐದು ಓವರ್‌ಗಳು ಇರುವಂತೆಯೇ 1 ವಿಕೆಟ್‌ಗೆ 133 ರನ್‌ ಗಳಿಸಿ ಗೆದ್ದಿತು. , -19. : ://./V9ZbTAc1hu# - -19 .# #T20WorldCup2022 ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.