ಭಾರತದ ಟಿ20 ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನಿಂಗ್ಸ್‌: ರೋಹಿತ್ ಮೆಚ್ಚುಗೆ ಮೆಲ್ಬರ್ನ್‌: ‘ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರ ಆಟ ಭಾರತದ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನಿಂಗ್ಸ್‌’ ಎಂದು ನಾಯಕ ರೋಹಿತ್‌ ಶರ್ಮಾ ಬಣ್ಣಿಸಿದ್ದಾರೆ. ‘ಹೌದು. ಇದು ವಿರಾಟ್‌ ಅವರ ಅತ್ಯುತ್ತಮ ಟಿ20 ಇನಿಂಗ್ಸ್‌ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದ ರೀತಿಯನ್ನು ನೋಡಿದರೆ ಇದು ಭಾರತದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದು’ ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್‌ತಿಳಿಸಿದರು. ‘13ನೇ ಓವರ್‌ವರೆಗೂ ಗೆಲುವಿನ ವಿಶ್ವಾಸವಿರಲಿಲ್ಲ. ಪ್ರತಿ ಓವರ್‌ ಕಳೆದಂತೆ ರನ್‌ ರೇಟ್‌ ಹೆಚ್ಚುತ್ತಲೇ ಇತ್ತು. ಅಂತಹ ಪರಿಸ್ಥಿತಿಯಿಂದ ತಂಡವನ್ನು ಜಯದತ್ತ ಕೊಂಡೊಯ್ಯುವುದು ಸುಲಭವಲ್ಲ’ ಎಂದರು. ಇವನ್ನೂ ಓದಿ *ವಿರಾಟ್ ಪರ್ವದ ಮತ್ತೊಂದು ಅಧ್ಯಾಯ *T20 | ಪಾಕ್ ವಿರುದ್ದ ರೋಚಕ ವಿಜಯದ ರೂವಾರಿ ವಿರಾಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.