ತಸ್ಕಿನ್‌ ಆಟಕ್ಕೆ ಒಲಿದ ಗೆಲುವು ಹೋಬರ್ಟ್‌: ವೇಗದ ಬೌಲರ್‌ ತಸ್ಕಿನ್‌ ಅಹ್ಮದ್‌ (25ಕ್ಕೆ 4) ಅವರ ವೈಯಕ್ತಿಕ ಶ್ರೇಷ್ಠ ಬೌಲಿಂಗ್‌ನ ಬಲದಿಂದ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡವನ್ನು 9 ರನ್‌ಗಳಿಂದ ಮಣಿಸಿತು. ಹೋಬರ್ಟ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 144 ರನ್‌ ಗಳಿಸಿತು. ನೆದರ್ಲೆಂಡ್ಸ್‌ 135 ರನ್‌ಗಳಿಗೆ ಆಲೌಟಾಯಿತು. ಬಾಂಗ್ಲಾ ತಂಡ ಟಿ20 ವಿಶ್ವಕಪ್‌ ಟೂರ್ನಿಯ ‘ಸೂಪರ್‌ 12’ ಹಂತದಲ್ಲಿ ಪಡೆದ ಮೊದಲ ಗೆಲುವು ಇದಾಗಿದೆ. ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದರೆ, ನೆದರ್ಲೆಂಡ್ಸ್‌ ತಂಡ ಭಾರತದ ಜತೆ ಆಡಲಿದೆ. ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 8 ವಿಕೆಟ್‌ಗಳಿಗೆ 144 (ನಜ್ಮುಲ್‌ ಹೊಸೇನ್ 25, ಸೌಮ್ಯ ಸರ್ಕಾರ್‌ 14, ಅಫೀಫ್‌ ಹೊಸೇನ್‌ 38, ನೂರುಲ್‌ ಹಸನ್‌ 13, ಮೊಸದ್ದೆಕ್‌ ಹೊಸೇನ್ ಔಟಾಗದೆ 20, ಪಾಲ್‌ ವಾನ್‌ ಮೀಕೆರೆನ್ 21ಕ್ಕೆ 2, ಬಸ್‌ ಡಿ ಲೀಡ್‌ 29ಕ್ಕೆ 2, ಟಿಮ್‌ ಪ್ರಿಂಗ್‌ಲ್‌ 10ಕ್ಕೆ 1) ನೆದರ್ಲೆಂಡ್ಸ್‌ 20 ಓವರ್‌ಗಳಲ್ಲಿ 135 (ಕಾಲಿನ್‌ ಆ್ಯಕರ್‌ಮನ್‌ 62, ಸ್ಕಾಟ್‌ ಎಡ್ವರ್ಡ್ಸ್‌ 16, ಪಾಲ್‌ ವಾನ್‌ ಮೀಕೆರೆನ್ 24, ತಸ್ಕಿನ್‌ ಅಹ್ಮದ್‌ 25ಕ್ಕೆ 4, ಹಸನ್‌ ಮಹಮೂದ್‌ 15ಕ್ಕೆ 2, ಶಕೀಬ್‌ ಅಲ್‌ ಹಸನ್‌ 32ಕ್ಕೆ 1, ಸೌಮ್ಯ ಸರ್ಕಾರ್‌ 29ಕ್ಕೆ 1) ಫಲಿತಾಂಶ: ಬಾಂಗ್ಲಾದೇಶಕ್ಕೆ 9 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.