ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವು ಬೆಂಗಳೂರು: ಶುಭಾ ಸತೀಶ್‌ (50) ಅವರ ಅಜೇಯ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ, ಬಿಸಿಸಿಐ ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು. ಸೂರತ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹಿಮಾಚಲ ಪ್ರದೇಶ 19.5 ಓವರ್‌ಗಳಲ್ಲಿ 90 ರನ್‌ಗಳಿಗೆ ಆಲೌಟಾಯಿತು. ಶ್ರೇಯಾಂಕಾ ಆರ್‌.ಪಾಟೀಲ್ (18ಕ್ಕೆ 4) ಮತ್ತು ಕೆ.ಪುಷ್ಪಾ (11ಕ್ಕೆ 2) ಅವರು ಎದುರಾಳಿ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ಹಿಮಾಚಲ ಪ್ರದೇಶ ತಂಡ ನೀಡಿದ ಗುರಿ ಕರ್ನಾಟಕಕ್ಕೆ ಸವಾಲಾಗಿ ಪರಿಣಮಿಸಲೇ ಇಲ್ಲ. ಶುಭಾ ಸೊಗಸಾದ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 54 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಹೊಡೆದರು. ಸಂಕ್ಷಿಪ್ತ ಸ್ಕೋರ್‌ ಹಿಮಾಚಲ ಪ್ರದೇಶ 19.5 ಓವರ್‌ಗಳಲ್ಲಿ 90: (ಮೋನಿಕಾ ದೇವಿ 27, ಸೋನಲ್‌ ಠಾಕೂರ್‌ 27, ಶ್ರೇಯಾಂಕಾ ಆರ್‌.ಪಾಟೀಲ್ 18ಕ್ಕೆ 4, ಕೆ.ಪುಷ್ಪಾ 11ಕ್ಕೆ 2) ಕರ್ನಾಟಕ 17.2 ಓವರ್‌ಗಳಲ್ಲಿ 3 ವಿಕೆಟ್‌ಗೆ 92: (ಶುಭಾ ಸತೀಶ್‌ ಔಟಾಗದೆ 50, ಕೆ.ರಕ್ಷಿತಾ ಔಟಾಗದೆ 20, ಹರ್ಲೀನ್‌ ಡಿಯೋಲ್ 22ಕ್ಕೆ 2) ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.