ವಿರಾಟ್ ಕೊಹ್ಲಿ ತಂಗಿದ್ದ ಹೋಟೆಲ್‌ನ ಕೊಠಡಿ ವಿಡಿಯೊ ಬಹಿರಂಗ: ದ್ರಾವಿಡ್‌ ಅಸಮಾಧಾನ ಅಡಿಲೇಡ್‌: ‘ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಪ್ರವಾಸದ ಅವಧಿಯಲ್ಲಿ ಜನರ ಕಣ್ಣಿನಿಂದ ದೂರವಿರಲು ಸಿಗುವ ಏಕೈಕ ಸ್ಥಳವೆಂದರೆ ಹೋಟೆಲ್‌ನ ಕೊಠಡಿ. ಅಲ್ಲೂ ಖಾಸಗಿತನ ಇಲ್ಲವೆನ್ನುವುದು ನಿರಾಸೆಯ ವಿಚಾರ’ ಎಂದು ಭಾರತ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ. ವಿರಾಟ್ ಕೊಹ್ಲಿ ತಂಗಿದ್ದ ಹೋಟೆಲ್‌ನ ಕೊಠಡಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಇದು ತುಂಬಾ ನಿರಾಸೆಯ ವಿಚಾರ. ವಿರಾಟ್‌ಗೆ ಮಾತ್ರವಲ್ಲ, ಯಾರಿಗೇ ಆದರೂ ಅದೊಂದು ಕಹಿ ಅನುಭವ’ ಎಂದಿದ್ದಾರೆ. ಪರ್ತ್‌ನಲ್ಲಿ ವಿರಾಟ್‌ ತಂಗಿದ್ದ ಹೋಟೆಲ್‌ನ ಕೊಠಡಿಯ ವಿಡಿಯೊ ವನ್ನು ಅದೇ ಹೋಟೆಲ್‌ನ ಸ್ವಚ್ಛತಾ ಸಿಬ್ಬಂದಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ವಿರಾಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ, ‘ಈ ರೀತಿ ಖಾಸಗಿತನಕ್ಕೆ ಧಕ್ಕೆ ಮಾಡುವುದನ್ನು ಸಹಿಸಲಾಗದು’ ಎಂದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.