34ನೇ ವಸಂತಕ್ಕೆ ಕಾಲಿಟ್ಟ ‘ಕಿಂಗ್’ ಕೊಹ್ಲಿ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಇಂದು (ಶನಿವಾರ) 34ನೇ ಹುಟ್ಟುಹಬ್ಬದ ಸಂಭ್ರಮ. ಕೊಹ್ಲಿ ಹುಟ್ಟುಹಬ್ಬದ ಅಂಗವಾಗಿ ಹಿರಿಯ ಕ್ರಿಕೆಟಿಗರು, ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಕೋರಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ. 4⃣7⃣7⃣ & 👍 2⃣4⃣3⃣5⃣0⃣ & 💪 2⃣0⃣1⃣1⃣ & 2⃣0⃣1⃣3⃣ 🏆 🏆 ' @ - # & - - . 👏 🎂 ../ttlFSE6Mh0 ವಿಶ್ವ ಕ್ರಿಕೆಟ್‌ನ ಅತ್ಯಂತ ನಿರ್ಭೀತ ಆಟಗಾರರಲ್ಲಿ ಒಬ್ಬರಾದ ‘ನಮ್ಮ ವಿರಾಟ ರಾಜ’ನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಆರ್‌ಸಿಬಿ ಟ್ವೀಟ್ ಮಾಡಿದ್ದಾರೆ. , ...! .@ ನಮ್ಮ ವಿರಾಟ ರಾಜ! 👑# # ../uu8sF0B4vV ಜನ್ಮದಿನದ ಶುಭಾಶಯಗಳು ಸಹೋದರ, ನಿಮಗೆ ಯಾವಾಗಲೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ. ❤️🧿 @ ♾️ ../XLl6SrvLbM ವಿರಾಟ್ ಕೊಹ್ಲಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಐಯ್ಯರ್ ಟ್ವೀಟ್ ಮಾಡಿದ್ದಾರೆ. @ 🫶 ../B8ASoNmvYo ಯಾರೊಬ್ಬರೂ ನಂಬದಿದ್ದಾಗ ನಂಬಿಕೆ ಇಟ್ಟಿದ್ದು ಕೊಹ್ಲಿ.ಅವರಿಗೆಜನ್ಮದಿನದ ಶುಭಾಶಯಗಳು ಎಂದು ಟೀಮ್ ಇಂಡಿಯಾದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ' ! @. ../NtQh9zej6G ಕ್ರಿಕೆಟ್‌ ದಂತಕಥೆಗೆ (ಕೊಹ್ಲಿ) ಜನ್ಮದಿನದ ಶುಭಾಶಯಗಳು. ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ತವರಿಗೆ ತನ್ನಿ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ! , . # 👑 🏆 @ ❤️💪🏻 ../GgtQYCay3K ಮೂರು ಮಾದರಿಗಳಲ್ಲಿ 477 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೊಹ್ಲಿ, 24,350 ರನ್‌ಗಳನ್ನು ಗಳಿಸಿದ್ದಾರೆ. ಜತೆಗೆ, 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.