T20 : ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಪಾಕಿಸ್ತಾನದ ಚೆಲುವೆಯ ಸಂದೇಶ ನವದೆಹಲಿ: ‘ಭಾರತೀಯ ಅಭಿಮಾನಿಗಳಿಗೆ ಧನ್ಯವಾದ‘ ಎಂದು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಣ ಸೆಮಿಫೈನಲ್ ಪಂದ್ಯದ ವೇಳೆ ಕಂಗೊಳಿಸಿದ್ದ ಪಾಕಿಸ್ತಾನದ ಅಭಿಮಾನಿ ‘ನಟಾಶಾ‘ ಹೇಳಿದ್ದಾರೆ. ../gNA7dYkW6Y 😂😂😂 ../ ಬುಧವಾರ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಸೆಮಿಫೈನಲ್‌ ‍ಪಂದ್ಯದಲ್ಲಿ, ವೀಕ್ಷಕರ ಗ್ಯಾಲರಿಯಲ್ಲಿದ್ದ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿತ್ತು. ../q6iiOI6ZIB : ../HdiNkNuGn3 ಎದೆಗೆ ಪಾಕಿಸ್ತಾನದ ಬಾವುಟವನ್ನು ಅಂಟಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ಚಿಯರ್‌ ಅಪ್‌ ಮಾಡುವ ಅವರ ಹಲವು ಫೋಟೋಗಳು ನೆಟ್ಟಿಗರ ಚರ್ಚೆಯ ವಸ್ತುವಾಗಿತ್ತು. ಅದರಲ್ಲೂ ಭಾರತೀಯರೇ ಹೆಚ್ಚಾಗಿ ಇವರ ಫೋಟೋವನ್ನು ಶೇರ್‌ ಮಾಡಿದ್ದರು. 🇵🇰💚 ../ ‘ಕ್ಯಾಮೆರಾಮೆನ್‌ ಯಾವತ್ತೂ ನಮ್ಮನ್ನು ನಿರಾಸೆಗೊಳಿಸುವುದಿಲ್ಲ‘ ಎಂದು ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ನಟಶಾ ಅವರ ಫೋಟೋ ಹಂಚಿಕೊಂಡಿದ್ದರು. ವಿವಿಧ ಟ್ರೋಲ್‌ ಪೇಜ್‌ಗಳಿಗೂ ನಟಶಾ ಅವರು ವಸ್ತುವಾಗಿದ್ದರು. 🙏 # 🇵🇰💚 ../ft6fsxJCDV ತಮ್ಮ ಪೋಟೋ ವೈರಲ್ ಮಾಡಿದ್ದಕ್ಕೆ ನಟಾಶಾ ಅವರು ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾ‌ರೆ. ‘ಭಾರತೀಯ ಅಭಿಮಾನಿಗಳಿಗೆ ‌ಧನ್ಯವಾದಗಳು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭೇಟಿಯಾಗೋಣ‘ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.