-20 : - ನಾಲ್ಕು ಸಾವಿರ ರನ್ ಹೊಸ್ತಿಲಲ್ಲಿ ವಿರಾಟ್ ಭಾರತದ ರನ್‌ ಯಂತ್ರ ವಿರಾಟ್ ಕೊಹ್ಲಿಗೆ ಶನಿವಾರ 34ನೇ ಜನ್ಮದಿನದ ಸಂಭ್ರಮ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಜನ್ಮದಿನ ಶುಭಾಶಯಗಳ ಮಹಾಪೂರವೇ ಹರಿದಿದೆ. ಸದ್ಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ತಂಡವು ಆಸ್ಟ್ರೇಲಿಯಾದಲ್ಲಿದೆ. ಭಾನುವಾರ ಜಿಂಬಾಬ್ವೆ ವಿರುದ್ಧ ಪಂದ್ಯ ಆಡಲಿದೆ. ಮೆಲ್ಬರ್ನ್‌ನಲ್ಲಿ ಶನಿವಾರ ವಿರಾಟ್ ತಮ್ಮ ಸಹ ಆಟಗಾರರ ಮುಂದೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್‌ (3932) ಗಳಿಸಿರುವ ದಾಖಲೆಯನ್ನೂ ಬರೆದಿರುವ ಕೊಹ್ಲಿ ಇನ್ನೊಂದು ಮೈಲುಗಲ್ಲಿನ ಸನಿಹದಲ್ಲಿದ್ದಾರೆ. 68 ರನ್‌ ಗಳಿಸಿದರೆ ಅವರು ನಾಲ್ಕು ಸಾವಿರ ರನ್‌ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಲಿದ್ಧಾರೆ. ಈ ಟೂರ್ನಿಯಲ್ಲಿ ಅವರು ಈಗಾಗಲೇ ಮೂರು ಅರ್ಧಶತಕಗಳನ್ನು ಗಳಿಸಿ ಉತ್ತಮ ಲಯದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.