ಟಿ20 ವಿಶ್ವಕಪ್: ಇಂಗ್ಲೆಂಡ್‌ ಬ್ಯಾಟರ್‌ ಮಲಾನ್‌ಗೆ ಗಾಯ, ಸೆಮಿಗೆ ಅನುಮಾನ ಅಡಿಲೇಡ್‌ : ಇಂಗ್ಲೆಂಡ್‌ನ ಬ್ಯಾಟರ್‌ ಡೇವಿಡ್‌ ಮಲಾನ್‌ ಅವರು ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಭಾರತದ ವಿರುದ್ಧ ಸೆಮಿಫೈನಲ್‌ನಲ್ಲಿ ಆಡುವುದು ಅನುಮಾನ. ಶ್ರೀಲಂಕಾ ಎದುರು ಶನಿವಾರ ನಡೆದ ‘ಸೂಪರ್‌ 12’ ಹಂತದ ತಮ್ಮ ಕೊನೆಯ ಲೀಗ್‌ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಫೀಲ್ಡಿಂಗ್‌ ವೇಳೆ ಗಾಯಗೊಂಡಿದ್ದ ಅವರು ಇಂಗ್ಲೆಂಡ್‌ನ ಇನಿಂಗ್ಸ್‌ ವೇಳೆ ಬ್ಯಾಟ್‌ ಮಾಡಲು ಬಂದಿರಲಿಲ್ಲ. ಭಾರತ– ಇಂಗ್ಲೆಂಡ್‌ ನಡುವಣ ಸೆಮಿ ಪಂದ್ಯ ಗುರುವಾರ ನಡೆಯಲಿದೆ. ಆ ವೇಳೆಗೆ ಮಲಾನ್‌ ಚೇತರಿಸಿಕೊಳ್ಳದಿದ್ದರೆ, ಫಿಲ್‌ ಸಾಲ್ಟ್‌ಗೆ ಅವಕಾಶ ಲಭಿಸುವ ಸಾಧ್ಯತೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.