ಟಿ–20 ಚಾಂಪಿಯನ್‌ ಇಂಗ್ಲೆಂಡ್‌ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು? ನವದೆಹಲಿ: ಆಸ್ಟ್ರೇಲಿಯಾದಲ್ಲಿ ಅಂತ್ಯವಾದ ಐಸಿಸಿ ಟಿ–20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಎರಡನೇ ಬಾರಿ ಚುಟುಕು ಕ್ರಿಕೆಟ್‌ ಟ್ರೋಫಿ ಎತ್ತಿ ಹಿಡಿದಿದೆ. ಈ ವಿಶ್ವಕಪ್ ಗೆಲುವಿನೊಂದಿಗೆ ಎರಡೆರಡು ಬಾರಿ ಟಿ–20 ವಿಶ್ವಕ‍ಪ್‌ ಟ್ರೋ‍ಫಿ ಜಯಿಸಿದ ಎರಡನೇ ತಂಡ ಎನ್ನುವ ಶ್ರೇಯ ಇಂಗ್ಲೆಂಡ್‌ ‍ಪಾಲಾಯಿತು. ಈ ಹಿಂದೆ ವೆಸ್ಟ್‌ ಇಂಡೀಸ್‌ ಈ ಸಾಧನೆ ಮಾಡಿತ್ತು. ಇದನ್ನೂ ಓದಿ:ಸಾರಿ ಬ್ರದರ್‌... ಇದನ್ನೇ ಕರ್ಮ ಅನ್ನುವುದು: ಅಖ್ತರ್‌ಗೆ ಶಮಿ ಗುದ್ದು ಚಾಂಪಿಯನ್‌ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು? ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ತಂಡವು ₹ 13.84 ಕೋಟಿ ನಗದು ಬಹುಮಾನ ‍ಪಡೆದುಕೊಂಡಿತು. ರನ್ನರ್‌ ಅಪ್‌ ಪಾಕಿಸ್ತಾನ ತಂಡವು ₹7.4 ಕೋಟಿ ಪಡೆ‌ಯಿತು. ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು? ಸೆಮಿಫೈನಲ್‌ನಲ್ಲಿ ಇಂ‌ಗ್ಲೆಂಡ್ ವಿರುದ್ಧ ಸೋಲನುಭವಿಸಿದ ಭಾರತ ₹4.5 ಕೋಟಿ ‌ಬಹುಮಾನ ಪ‍ಡೆಯಿತು. ಪಾಕಿಸ್ತಾನ ವಿರುದ್ಧ ಸೋತ ನ್ಯೂಜಿಲೆಂಡ್ ತಂಡಕ್ಕೆ ₹4.19 ಕೋಟಿ ಬಹುಮಾನವಾಗಿ ಲಭಿಸಿತು. ಸೂಪರ್‌ 12 ರೌಂಡ್‌ನಲ್ಲಿ ನ್ಯೂಜಿಲೆಂಡ್‌ಗಿಂತ ಒಂದು ಪಂದ್ಯ ಹೆಚ್ಚು ಗೆದ್ದಿದ್ದಕ್ಕೆ ಭಾರತ ತಂಡಕ್ಕೆ ಹೆಚ್ಚಿನ ನಗದು ಬಹುಮಾನಕ್ಕೆ ಭಾಜನವಾಯ್ತು. ಇದನ್ನೂ ಓದಿ:T20 : ಇಂಗ್ಲೆಂಡ್ ತಂಡದ ಎಡಗೈ ವೇಗಿ ಸ್ಯಾಮ್ ಕರನ್ ಶ್ರೇಷ್ಠ ಆಟಗಾರ ಯಾವ ತಂಡಕ್ಕೆ ಎಷ್ಟು ನಗದು ಬಹುಮಾನ (ರೂಪಾಯಿಗಳಲ್ಲಿ) ಇಂಗ್ಲೆಂಡ್ – 13.84 ಕೋಟಿ ಪಾಕಿಸ್ತಾನ – 7.40 ಕೋಟಿ ಭಾರತ – 4.50 ಕೋಟಿ ನ್ಯೂಜಿಲೆಂಡ್‌ – 4.19 ಕೋಟಿ ಆಸ್ಟ್ರೇಲಿಯಾ – 1.53 ಕೋಟ ದಕ್ಷಿಣ ಅಫ್ರಿಕಾ – 1.20 ಕೋಟಿ ಬಾಂಗ್ಲಾದೇಶ – 1.20 ಕೋಟಿ ಶ್ರೀಲಂಕಾ – 1.85 ಕೋಟಿ ವೆಸ್ಟ್‌ ಇಂಡೀಸ್‌ – 64.40 ಲಕ್ಷ ಅಫ್ಘಾನಿಸ್ತಾನ– 56.35 ಲಕ್ಷ ಜಿಂಬಾಬ್ವೆ– 88.50 ಲಕ್ಷ ಐರ್ಲೆಂಡ್ – 1.53 ಕೋಟಿ ಯುಎಇ – 64.40 ಲ‌ಕ್ಷ ಸ್ಕಾಟ್ಲೆಂ‌ಡ್ – 64.40 ಲಕ್ಷ ನಮೀಬಿಯಾ – 64.40 ಲಕ್ಷ ನೆದರ್‌ಲ್ಯಾಂಡ್ – 1.85 ಕೋಟಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.