ಮುರಳೀಧರನ್‌ ಜೀವನಾಧಾರಿತ ‘800’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿದ ಸಚಿನ್ ಮುಂಬೈ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ‘800’ ಸಿನಿಮಾದ ಟ್ರೇಲರ್ ಅನ್ನು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರು ಇಂದು (ಮಂಗಳವಾರ) ಬಿಡುಗಡೆಗೊಳಿಸಿದರು. # | : '800'. . " . ... … ../hDtKf0COVc ಮುಂಬೈನಲ್ಲಿ ನಡೆದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಶ್ರೀಲಂಕಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸನತ್‌ ಜಯಸೂರ್ಯ ಅವರು ಕೂಡ ಹಾಜರಿದ್ದರು. ಈ ವೇಳೆ ಮಾತನಾಡಿದ ಸಚಿನ್, ‘ಇವರಿಬ್ಬರ ಜತೆ ಕೆಲವು ಸಮಯ ಕಳೆದಿದ್ದು ನನಗೆ ಸಂತೋಷ ತಂದಿದೆ. ಒಳ್ಳೆಯ ವಿಚಾರ ಏನೆಂದರೆ, ಹಲವು ವರ್ಷಗಳ ಬಳಿಕವೂ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ನಾವು ಪರಸ್ಪರ ಸಂಭ್ರಮ ಹಂಚಿಕೊಂಡಿದ್ದೇವೆ. ಎಲ್ಲರೂ ಸಿನಿಮಾ ನೋಡುತ್ತಾರೆ ಎನ್ನುವ ಆಶಾಭಾವನೆ ಇದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.