2023: ಚೆನ್ನೈ ತಂಡಕ್ಕೆ ಧೋನಿಯೇ ನಾಯಕ ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ನೇ ಸಾಲಿನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಮಹೇಂದ್ರ ಸಿಂಗ್ ಧೋನಿ ಅವರೇ ಮುನ್ನಡೆಸಲಿದ್ದಾರೆ. ಈ ವಿಚಾರವನ್ನು ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕೆ.ಎಸ್. ವಿಶ್ವನಾಥನ್ ಖಚಿತಪಡಿಸಿದ್ದಾರೆ. ಧೋನಿಯ ಮುಂದಾಳತ್ವದಲ್ಲಿ ಸಿಎಸ್‌ಕೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ:ಐಪಿಎಲ್‌: ಪ್ರಮುಖರನ್ನು ಉಳಿಸಿಕೊಂಡ ಆರ್‌ಸಿಬಿ ಐಪಿಎಲ್ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳು ತನ್ನ ಬಳಿ ಉಳಿಸಿಕೊಂಡಿರುವ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಬಹಿರಂಗಗೊಳಿಸಿದೆ. ಐಪಿಎಲ್ ೀಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಸಿಎಸ್‌ಕೆ ತಂಡವು ಡ್ವೇನ್ ಬ್ರಾವೋ, ಆ್ಯಡಂ ಮಿಲ್ನೆ, ಕ್ರಿಸ್ ಜಾರ್ಡನ್, ಎನ್. ಜಗದೀಶನ್, ಸಿ. ಹರಿ ನಿಶಾಂತ್, ಕೆ. ಭಗತ್ ವರ್ಮಾ, ಕೆ.ಎಂ. ಆಸಿಫ್ ಮತ್ತು ರಾಬಿನ್ ಉತ್ತಪ್ಪರನ್ನು ಕೈಬಿಟ್ಟಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು 2010, 2011, 2018 ಹಾಗೂ 2021ನೇ ಸಾಲಿನಲ್ಲಿ ಐಪಿಎಲ್ ಟ್ರೋಫಿ ಜಯಿಸಿತ್ತು. ಅಲ್ಲದೆ 2010 ಹಾಗೂ 2014ರಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ಕೂಡ ಗೆದ್ದಿತ್ತು. ಓದಿ... ‘ಈ ಆಟ ಒಳ್ಳೆಯ ಆಟಗಾರರಿಗೆ ಅಲ್ಲ’: ಮಯಂಕ್ ಅಗರವಾಲ್ ಬಗ್ಗೆ ಸಂಜಯ್ ಮಂಜ್ರೇಕರ್ ಮಾತು . . 🤩 ⏳# # 🦁💛 ../PPB5wjCEVE ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.