T20 : ಚುಟುಕು ಕ್ರಿಕೆಟ್‌ನಲ್ಲಿ 4 ಸಾವಿರ ಪೂರೈಸಿದ ಏಕೈಕ ಆಟಗಾರ ಕೊಹ್ಲಿ ಅಡಿಲೇಡ್‌: ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ ಮಾದರಿಯಲ್ಲಿ ನಾಲ್ಕು ಸಾವಿರ ರನ್‌ ಪೂರೈಸಿದ ವಿಶ್ವದ ಏಕೈಕ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 43 ರನ್‌ ಗಳಿಸಿದ್ದಾಗ ಅವರು ಈ ಸಾಧನೆ ಮಾಡಿದರು. ಚುಟುಕು ಮಾದರಿಯಲ್ಲಿ ಇದುವರೆಗೆ115ಪಂದ್ಯಗಳ107 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, ಬರೋಬ್ಬರಿ 4,008 ರನ್‌ ಗಳಿಸಿದ್ದಾರೆ.ಈ ಪಂದ್ಯಕ್ಕೂ ಮುನ್ನ ಅವರ ಖಾತೆಯಲ್ಲಿ 4,958 ರನ್‌ ಗಳಿದ್ದವು. ಭಾರತಕ್ಕೆ ಸೋಲು; ಇಂಗ್ಲೆಂಡ್‌ ಫೈನಲ್‌ಗೆ ಇಂದು (ನವೆಂಬರ್‌ 10 ರಂದು) ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು. ವಿರಾಟ್‌ ಕೊಹ್ಲಿ (50) ಹಾಗೂ ಹಾರ್ದಿಕ್‌ ಪಾಂಡ್ಯ (63) ಅರ್ಧಶತಕ ಸಿಡಿಸಿ ನೆರವಾಗಿದ್ದರು. ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ಒಂದೂ ವಿಕೆಟ್‌ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲೆಕ್ಸ್‌ ಹೇಲ್ಸ್‌ ಮತ್ತು ಜಾಸ್‌ ಬಟ್ಲರ್‌ ಜೋಡಿ ಮುರಿಯದ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 170 ರನ್‌ ಕಲೆಹಾಕಿತು. ಇದನ್ನೂ ಓದಿ: ಗೆದ್ದು ಶ್ರೇಷ್ಠ ನಾಯಕನಾಗಲು ಸಾಧ್ಯವಿಲ್ಲ; ರೋಹಿತ್ ವಿರುದ್ಧ ನೆಟ್ಟಿಗರ ಕಿಡಿ ಹೇಲ್ಸ್‌ಕೇವಲ 47 ಎಸೆತಗಳಲ್ಲಿ 7ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 89 ರನ್‌ ಚಚ್ಚಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಬಟ್ಲರ್‌ 49 ಎಸೆತಗಳಲ್ಲಿ 3ಸಿಕ್ಸರ್‌ ಮತ್ತು 9 ಬೌಂಡರಿ ಸಹಿತ 80ರನ್‌ ಸಿಡಿಸಿದರು. ಹೀಗಾಗಿ ಇನ್ನೂ ನಾಲ್ಕು ಓವರ್‌ ಬಾಕಿ ಇರುವಂತೆಯೇ ಇಂಗ್ಲೆಂಡ್‌ ಜಯ ಸಾಧಿಸಿತು.ಇದರೊಂದಿಗೆ ನವೆಂಬರ್‌ 13ರಂದು ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಐವರು 🚨 🔓 4⃣0⃣0⃣0⃣ T20I & 💪 💪 , @! 👏 👏 ▶️ ://./5t1NQ2iUeJ # | #T20WorldCup | # ../JbEXzq24jW 👑 4⃣0⃣0⃣0⃣ T20I !#T20WorldCup | # | 📝: ://./ ../F4v9ppWfVo ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.