ವಿಶ್ವಕಪ್‌ ಕ್ರಿಕೆಟ್‌: ಮೆಟ್ರೊ ರೈಲಿನಲ್ಲಿ ಪೇಪರ್ ಟಿಕೆಟ್‌ ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ಇರುವ ದಿನಗಳಲ್ಲಿ ಮೆಟ್ರೊ ಪ್ರಯಾಣಿಕರಿಗೆ ’ರಿಟರ್ನ್‌ ಜರ್ನಿ’ ಪೇಪರ್‌ ಟಿಕೆಟ್‌ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ದೊರೆಯಲಿದೆ. ಅ.20, 26, ನವೆಂಬರ್‌ 4, 9 ಮತ್ತು 12ರಂದು ಕ್ರಿಕೆಟ್‌ ಪಂದ್ಯ ನಡೆಯಲಿದೆ. ಕಬ್ಬನ್‌ ಪಾರ್ಕ್‌ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳಿಂದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಆ ದಿನಗಳಲ್ಲಿ ಸಂಜೆ 4ರ ನಂತರ ಒಮ್ಮೆ ಪ್ರಯಾಣಿಸಲು ‘ರಿಟರ್ನ್‌ ಜರ್ನಿ’ ಪೇಪರ್‌ ಟಿಕೆಟ್‌ ಬಳಸಬಹುದು. ಕಾಗದ ಟಿಕೆಟ್‌ ಬೆಲೆ ₹ 50 ಆಗಿರುತ್ತದೆ. ಕ್ರಿಕೆಟ್‌ ಆರಂಭವಾಗುವ ಮೊದಲೇ ಪೇಪರ್‌ ಟಿಕೆಟ್‌ ಖರೀದಿಸಿದರೆ, ಪಂದ್ಯ ಮುಗಿದ ಬಳಿಕ ಅಡಚಣೆ ಇಲ್ಲದೇ ಹಿಂತಿರುಗಬಹುದು. ಎಂ.ಜಿ. ರಸ್ತೆ, ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಎಂದಿನಂತೆ ಸ್ಮಾರ್ಟ್ ಕಾರ್ಡ್‌ ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಉಪಯೋಗಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.