ಎನ್. ಧರ್ಮಸಿಂಗ್ ಕ್ರಿಕೆಟ್ ಟೂರ್ನಿ ಡಿ. 1 ರಿಂದ ಬೀದರ್: ತಾಲ್ಲೂಕಿನ ಮನ್ನಳ್ಳಿ ಹಾಗೂ ರಾಜಗೀರಾ ಗ್ರಾಮದಲ್ಲಿ ಡಿಸೆಂಬರ್ 1 ರಿಂದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಸ್ಮರಣಾರ್ಥ 6ನೇ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ದಕ್ಷಿಣ ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ತಿಳಿಸಿದ್ದಾರೆ. ಟೂರ್ನಮೆಂಟ್‍ನಲ್ಲಿ ವಿಜೇತ ತಂಡಕ್ಕೆ ₹ 1.51 ಲಕ್ಷ ಹಾಗೂ ರನ್ನರ್ ಅಪ್ ತಂಡಕ್ಕೆ ₹ 75 ಸಾವಿರ ನಗದು ಹಾಗೂ ಟ್ರೋಫಿ ದೊರೆಯಲಿದೆ ಎಂದು ಹೇಳಿದ್ದಾರೆ. ಸರಣಿ ಪುರುಷೋತ್ತಮ, ಪಂದ್ಯ ಪುರುಷ, ಉತ್ತಮ ಬೌಲರ್ ಹಾಗೂ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಗಳನ್ನೂ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ಪಂದ್ಯ 10 ಓವರ್‌ಗಳದ್ದಾಗಿರಲಿದೆ. ಬೀದರ್ ದಕ್ಷಿಣ ಕ್ಷೇತ್ರದ ತಂಡಗಳಿಗೆ ಹೆಚ್ಚು ಪ್ರಾತಿನಿಧ್ಯ ಕೊಡಲಾಗುವುದು. ಆಸಕ್ತ ತಂಡಗಳು ಸದಸ್ಯರ ಆಧಾರ್ ಕಾರ್ಡ್ ಹಾಗೂ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ನವೆಂಬರ್ 15 ರಿಂದ 28 ರ ವರೆಗೆ ಹೆಸರು ನೋಂದಾಯಿಸಬಹುದು ಎಂದು ಹೇಳಿದ್ದಾರೆ. ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಶ್ರೀಮಂತ ಕೋಟೆ (6361664754) ಅಥವಾ ಇಮ್ತಿಯಾಜ್ (8000132019) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.