ವಿಜಯ್‌ ಹಜಾರೆ: ಮಿಂಚಿದ ಶ್ರೇಯಸ್ ಕೋಲ್ಕತ್ತ: ಶ್ರೇಯಸ್‌ ಗೋಪಾಲ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮೇಘಾಲಯ ತಂಡವನ್ನು 115 ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿತು. ಕೋಲ್ಕತ್ತದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟಾಯಿತು. ಮೇಘಾಲಯ 46 ಓವರ್‌ಗಳಲ್ಲಿ 144 ರನ್‌ ಮಾತ್ರ ಗಳಿಸಿತು. 76 ಎಸೆತಗಳಲ್ಲಿ 64 ರನ್‌ ಗಳಿಸಿದ್ದಲ್ಲದೆ, 8 ಓವರ್‌ಗಳಲ್ಲಿ 21 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ಶ್ರೇಯಸ್‌, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 50 ಓವರ್‌ಗಳಲ್ಲಿ 259 (ಆರ್‌.ಸಮರ್ಥ್‌ 46, ಮಯಂಕ್‌ ಅಗರವಾಲ್ 15, ನಿಕಿನ್‌ ಜೋಸ್‌ 13, ಮನೀಷ್‌ ಪಾಂಡೆ 36, ಶ್ರೇಯಸ್‌ ಗೋಪಾಲ್‌ 64, ಬಿ.ಆರ್‌.ಭರತ್‌ 32, ಅಭಿಷೇಕ್‌ ಕುಮಾರ್‌ 54ಕ್ಕೆ 3, ಚಿರಾಗ್‌ ಖುರಾನಾ 42ಕ್ಕೆ 2, ರಾಜೇಶ್‌ ಬಿಷ್ಣೋಯಿ 47ಕ್ಕೆ 2) ಮೇಘಾಲಯ 46 ಓವರ್‌ಗಳಲ್ಲಿ 144 (ಸೂರ್ಯ ರಾಯ್ 38, ಚಿರಾಗ್‌ ಖುರಾನಾ 32, ಶ್ರೇಯಸ್‌ ಗೋಪಾಲ್‌ 21ಕ್ಕೆ 3, ರೋನಿತ್‌ ಮೋರೆ 22ಕ್ಕೆ 2, ಕೆ.ಗೌತಮ್‌ 33ಕ್ಕೆ 3) ಫಲಿತಾಂಶ: ಕರ್ನಾಟಕಕ್ಕೆ 115 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.