ನ್ಯೂಜಿಲೆಂಡ್‌ ಪ್ರವಾಸ: ಭಾರತ ತಂಡಕ್ಕೆ ಮುನೀಶ್ ಬಾಲಿ ಫೀಲ್ಡಿಂಗ್ ಕೋಚ್ ನವದೆಹಲಿ: ಸೀಮಿತ ಓವರ್‌ಗಳ ಸರಣಿಗಾಗಿ ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಮುನೀಶ್ ಬಾಲಿ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ನ. 18ರಿಂದ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಸರಣಿಗೆ ವಿವಿಎಸ್‌ ಲಕ್ಷ್ಮಣ್ ಅವರಿಗೆ ಮುಖ್ಯ ಕೋಚ್‌ ಹೊಣೆ ವಹಿಸಲಾಗಿದೆ. ಕಿವೀಸ್ ತಂಡದ ಎದುರು ಭಾರತ ತಲಾ ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.