ಟಾಸ್‌ ಗೆದ್ದ ಇಂಗ್ಲೆಂಡ್‌: ಫೀಲ್ಡಿಂಗ್‌ ಆಯ್ಕೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯ ಆರಂಭಗೊಂಡಿದ್ದು, ಪಾಕಿಸ್ತಾನದ ವಿರುದ್ಧ ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡಿಂಗ್‌ ಆಯ್ದುಕೊಂಡಿದೆ. ಮಳೆಯ ಭೀತಿಯಲ್ಲೇ ಪಂದ್ಯ ಪ್ರಾರಂಭಗೊಂಡಿದ್ದು ಇತ್ತೀಚಿನ ವರದಿಯಂತೆ ಪಾಕಿಸ್ತಾನ 4.2 ಓವರ್‌ ಮುಕ್ತಾಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 29 ರನ್‌ಗಳಿಸಿದೆ. ವಿಶ್ವಕಪ್‌ ಗೆಲ್ಲುವ ಕನಸಿನಲ್ಲಿ ಎರಡೂ ತಂಡಗಳಿದ್ದು, ಉಭಯ ತಂಡಗಳೂ ಪ್ರಬಲವಾಗಿವೆ. ಭಾರತವನ್ನು ಹೀನಾಯವಾಗಿ ಮಣಿಸಿ ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿದ್ದರೆ, ಪಾಕಿಸ್ತಾನವು ನ್ಯೂಜಿಲೆಂಡ್‌ ವಿರುದ್ಧ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.