ಮಳೆಯಿಂದ ಭಾರತ–ನ್ಯೂಜಿಲೆಂಡ್‌ ಪಂದ್ಯ ರದ್ದು ವೆಲ್ಲಿಂಗ್ಟನ್‌: ಭಾರತ–ನ್ಯೂಜಿಲೆಂಡ್‌ ನಡುವಿನ 3 ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಶುಕ್ರವಾರ ಸತತವಾಗಿ ತುಂತುರು ಮಳೆ ಸುರಿದ ಕಾರಣ ಟಾಸ್‌ ಕೂಡ ನಡೆಯದೇ ಪಂದ್ಯ ರದ್ದಾಯಿತು. ಪಂದ್ಯಕ್ಕಾಗಿ ಕಾತುರತೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು. ನ್ಯೂಜಿಲೆಂಡ್‌ ಪ್ರವಾಸದ ಭಾಗವಾಗಿ ಭಾರತವು 3 ಟಿ–20 ಹಾಗೂ ಹಲವು ಏಕದಿನ ಪಂದ್ಯಗಳನ್ನು ಆಡಲಿದೆ. ಎರಡನೇ ಟಿ–20 ಪಂದ್ಯ ಭಾನುವಾರ ನಡೆಯಲಿದೆ. ಉಭಯ ತಂಡಗಳು ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ನಡೆದ ಟಿ–20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸರಣಿಯಿಂದ ಹೊರಬಿದ್ದಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.