ಯುವಿ–ಹಜೆಲ್ ದಾಂಪತ್ಯಕ್ಕೆ ಆರು ವರ್ಷ: ಮಗನ ಜತೆ ಫೋಟೊ ಪೋಸ್ಟ್ ಬೆಂಗಳೂರು: ನಟಿ ಹಜೆಲ್ ಕೀಚ್ ಮತ್ತು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ದಾಂಪತ್ಯಕ್ಕೆ ಆರು ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಯುವಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಮಗ ಒರಿಯನ್ ಕೂಡ ಇದ್ದಾರೆ. ಪತ್ನಿ ಹಜೆಲ್ ಕೀಚ್ ಮತ್ತು ಪುತ್ರನ ಜತೆಗಿರುವ ಫೋಟೊ ಪೋಸ್ಟ್ ನೋಡಿರುವ ಯುವಿ ಅಭಿಮಾನಿಗಳು, ದಂಪತಿಗೆ ಶುಭ ಹಾರೈಸಿದ್ದಾರೆ. ಆರು ವರ್ಷಗಳ ದಾಂಪತ್ಯದ ಈ ಸವಿಸಮಯದಲ್ಲಿ ನನ್ನ ಜತೆಗೆ, ನನ್ನೆಲ್ಲಾ ಸಣ್ಣ–ಪುಟ್ಟ ಖುಷಿಯಲ್ಲಿ ಭಾಗಿಯಾಗಿರುವೆ. ವಾರ್ಷಿಕೋತ್ಸವದ ಶುಭಾಶಯಗಳು ಎಂದು ಯುವರಾಜ್ ಪತ್ನಿಗೆ ಹೇಳಿದ್ದಾರೆ. (@) ಆಲಿಯಾ ಭಟ್–ರಣಬೀರ್ ಕಪೂರ್‌ಗೆ ಕ್ಯೂಟ್ ಆಗಿ ಶುಭಕೋರಿದ ಅಮುಲ್ ಇಂಡಿಯಾ ದೀಪಾವಳಿ ಹಬ್ಬದ ಸಂದರ್ಭದಲ್ಲೂ ಯುವರಾಜ್ ಅವರು ಪತ್ನಿ ಮತ್ತು ಪುತ್ರ ಒರಿಯನ್ ಜತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಖುಷಿ ಹಂಚಿಕೊಂಡ ರಜನಿಕಾಂತ್ ಪುತ್ರಿ ಸೌಂದರ್ಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.