ರಿಕಿ ಪಾಂಟಿಂಗ್‌ ಚೇತರಿಕೆ ಪರ್ತ್‌ (ಪಿಟಿಐ): ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಚೇತರಿಸಿಕೊಂಡಿದ್ದು, ವೀಕ್ಷಕ ವಿವರಣೆಕಾರನಾಗಿ ಕೆಲಸ ಮುಂದುವರಿಸಿದ್ದಾರೆ. ಪರ್ತ್‌ನಲ್ಲಿ ನಡೆಯುತ್ತಿರುವಆಸ್ಟ್ರೇಲಿಯಾ–ವೆಸ್ಟ್ ಇಂಡೀಸ್‌ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ವೀಕ್ಷಕ ವಿವರಣೆ ಮಾಡುವ ಸಂದರ್ಭದಲ್ಲಿ ಶುಕ್ರವಾರ ಅಸ್ವಸ್ಥರಾಗಿದ್ದ ಅವರನ್ನು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕಳೆದ ದಿನ ನಾನು ತುಂಬಾ ಜನರನ್ನು ಗಾಬರಿಗೊಳ್ಳುವಂತೆ ಮಾಡಿದ್ದೆ ಮಾತ್ರವಲ್ಲ, ನನಗೂ ಆತಂಕ ಉಂಟಾಗಿತ್ತು’ ಎಂದು ಶನಿವಾರ ನಾಲ್ಕನೇ ದಿನದಾಟದ ವೀಕ್ಷಕ ವಿವರಣೆ ವೇಳೆ ಪಾಂಟಿಂಗ್‌ ಹೇಳಿದರು. ‘ಮೂರನೇ ದಿನದಾಟದ ಕಾಮೆಂಟ್ರಿ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಮತ್ತು ತಲೆ ಸುತ್ತುವಿಕೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ಆಸ್ಪತ್ರೆಗೆ ತೆರಳಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.