ಐಪಿಎಲ್‌ ಬಿಡ್‌ಗೆ 991 ಆಟಗಾರರ ನೋಂದಣಿ ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್‌ ಟೂರ್ನಿಯ ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಸ್ಪರ್ಧಿಸಲು 991 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರಕ್ರಿಯೆಯಲ್ಲಿ 14 ದೇಶಗಳ ಆಟಗಾರರು ಇದ್ದಾರೆ. ಅದರಲ್ಲಿ ಭಾರತದ 714, ಆಸ್ಟ್ರೇಲಿಯಾ 57, ದಕ್ಷಿಣ ಆಫ್ರಿಕಾದ 52, ವೆಸ್ಟ್ ಇಂಡೀಸ್ 33, ಇಂಗ್ಲೆಂಡ್ 31, ನ್ಯೂಜಿಲೆಂಡ್ 27, ಶ್ರೀಲಂಕಾ 23, ಅಫ್ಗಾನಿಸ್ತಾನ 14, ಐರ್ಲೆಂಡ್ 8, ನೆದರ್ಲೆಂಡ್ಸ್ 7, ಬಾಂಗ್ಲಾದೇಶ 6, ಯುಎಇ 6, ಜಿಂಬಾಬ್ವೆ 6, ನಮಿಬಿಯಾ 5 ಮತ್ತು ಸ್ಕಾಟ್ಟೆಂಡ್‌ನ ಇಬ್ಬರು ಆಟಗಾರರು ಇದ್ದಾರೆ. 2023 ಆವೃತ್ತಿಯಲ್ಲಿ ಆಡುವ ತಂಡಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿವೆ. ಈಗಾಗಲೇ ತಮ್ಮ ತಂಡಗಳಿಂದ ಆಟಗಾರರನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.