2nd : ಮೆಹದಿ ಹಸನ್ ಶತಕ, ಭಾರತದ ಗೆಲುವಿಗೆ 272 ರನ್ ಗುರಿ ಮೀರಪುರ್: ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಸವಾಲಿನ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಅನಾಮುಲ್ ಹೇಗ್ ಬಿಜಯ್ 7, ಲಿಟನ್ ಕುಮಾರ್ ದಾಸ್ 11 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ನಜ್ಮುಲ್ ಹುಸೇನ್ ಶಾಂತೊ 21, ಶಕೀಬ್ ಅಲ್ ಹಸನ್ 08, ಮುಷ್ಫಿಕುರ್ ರಹೀಮ್ 12 ರನ್ ಗಳಿಸಿ ಹೆಚ್ಚು ಹೊತ್ತು ಆಡಲಿಲ್ಲ. ಒಂದು ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಬಾಂಗ್ಲಾ ತಂಡಕ್ಕೆ ಮೆಹಮೂದ್ ಉಲ್ಲಾಹ 77, ಮೆಹದಿ ಹಸನ್ ಮಿರಾಜ್ ಔಟಾಗದೆ 100 ರನ್‌ ಗಳಿಸಿ ಆಸರೆಯಾದರು. ಭಾರತದ ಪರವಾಷಿಂಗ್ಟನ್ ಸುಂದರ್ 3, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ತಲಾ 3 ವಿಕೆಟ್ ಪಡೆದರು. ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ವಿಕೆಟ್ ಅಂತರದ ಸೋಲಿನ ಮುಖಭಂಗಕ್ಕೊಳಗಾಗಿತ್ತು.ಸರಣಿ ಗೆಲ್ಲಲು ಅಂತಿಮ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ! 271/7 . . - ://./e8tBEGspdJ # ../B1hyZOdMas ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.