ಅಲ್ಪಮೊತ್ತಕ್ಕೆ ಕುಸಿದ ಹರಿಯಾಣ ರೋಹ್ಟಕ್: ವೈಭವ್ ಅರೋರಾ (15ಕ್ಕೆ4) ಮತ್ತು ಸಿದ್ಧಾರ್ಥ್ ಶರ್ಮಾ (12ಕ್ಕೆ3) ಬೌಲಿಂಗ್ ಮುಂದೆ ಹರಿಯಾಣ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು. ಚೌಧರಿ ಬನ್ಸಿಲಾಲ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟೂರ್ನಿಯ ಪಂದ್ಯದ ಮೊದಲ ದಿನವಾದ ಮಂಗಳವಾರ ಹರಿಯಾಣ ತಂಡವು ಹಿಮಾಚಲ ಪ್ರದೇಶದ ಎದುರು 20.4 ಓವರ್‌ಗಳಲ್ಲಿ 46 ರನ್ ಗಳಿಸಿ ಆಲೌಟ್ ಆಯಿತು. ಬ್ಯಾಟಿಂಗ್ ಆರಂಭಿಸಿದ ಹಿಮಾಚಲ ತಂಡವು ದಿನದಾಟದ ಕೊನೆಗೆ 67 ಓವರ್‌ಗಳಲ್ಲಿ 1 ವಿಕೆಟ್‌ಗೆ 246 ರನ್ ಗಳಿಸಿತು. ಒಟ್ಟು 200 ರನ್‌ಗಳ ಮುನ್ನಡೆ ಪಡೆಯಿತು. ಪ್ರಶಾಂತ್ ಚೋಪ್ರಾ (137; 181ಎ, 4X16, 4X16) ಅಮೋಘ ಶತಕ ಬಾರಿಸಿದರು. ರಾಘವ್ ಧವನ್ (ಬ್ಯಾಟಿಂಗ್ 86) ಕ್ರೀಸ್‌ನಲ್ಲಿದ್ದಾರೆ. ಸಂಕ್ಷಿಪ್ತ ಸ್ಕೋರು: ರೋಹ್ಟಕ್: ಹರಿಯಾಣ 20.4 ಓವರ್‌ಗಳಲ್ಲಿ 46 (ವೈಭವ್ ಅರೋರಾ 15ಕ್ಕೆ4, ಸಿದ್ಧಾರ್ಥ್ ಶರ್ಮಾ 12ಕ್ಕೆ3) ಹಿಮಾಚಲಪ್ರದೇಶ: 1 ವಿಕೆಟ್‌ಗೆ 246 (ಪ್ರಶಾಂತ್ ಚೋಪ್ರಾ 137, ರಾಘವ್ ಧವನ್ ಬ್ಯಾಟಿಂಗ್ 86). ಕೋಲ್ಕತ್ತದಲ್ಲಿ; ಉತ್ತರಪ್ರದೇಶ: 63.5 ಓವರ್‌ಗಳಲ್ಲಿ 198 (ರಿಂಕು ಸಿಂಗ್ 79, ಪ್ರಿಯಂ ಗರ್ಗ್ 53, ಇಶಾನ್ ಪೊರೆಲ್ 35ಕ್ಕೆ5) ಬಂಗಾಳ: 4ಕ್ಕೆ29 (ಶಿವಂ ಮಾವಿ 14ಕ್ಕೆ3) ಸೊವಿಮ್‌ನಲ್ಲಿ: ಉತ್ತರಾಖಂಡ 78 ಓವರ್‌ಗಳಲ್ಲಿ 282 (ಕುನಾಲ್ ಚಾಂಡೆಲಾ 92, ದೀಕ್ಷಾಂಕ್ಷು ನೇಗಿ 83, ಆಕಾಶ್ ಸಿಂಗ್ 45ಕ್ಕೆ3), ನಾಗಾಲ್ಯಾಂಡ್: ವಿಕೆಟ್ ನಷ್ಟವಿಲ್ಲದೇ 9. ಕಟಕ್‌ನಲ್ಲಿ: ಒಡಿಶಾ 5ಕ್ಕೆ214 (ಶಂತನು ಮಿಶ್ರಾ 61, ಶುಭ್ರಾಂಶು ಸೇನಾಪತಿ 52, ಲುಕ್‌ಮನ್ ಮೆರಿವಾಲಾ 46ಕ್ಕ2) ವಿರುದ್ಧ ಬರೋಡಾ. ಮುಲ್ಲನಪುರದಲ್ಲಿ: ಪಂಜಾಬ್ 85 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 363 (ಅಭಿಷೇಕ್ ಶರ್ಮಾ 100, ಪ್ರಭಸಿಮ್ರನ್ ಸಿಂಗ್ 202, ನಮನ್ ಧೀರ್ 34, ರೋಹಿತ್ ದಂಡಾ 50ಕ್ಕೆ2) ವಿರುದ್ಧ ಚಂಡೀಗಢ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.