ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸೋಲು ಬ್ರೆಬೋರ್ನ್‌: ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ಎದುರಿನ ಟಿ20 ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೋಲು ಅನುಭವಿಸಿತು. ಎಲಿಸಾ ಪೆರಿ ಅರ್ಧಶತಕ (72) ಮತ್ತುಆ್ಯಶ್ಲಿ ಗಾರ್ಡನರ್ (42 ರನ್‌, 20ಕ್ಕೆ 2 ವಿಕೆಟ್‌) ಅವರ ಆಲ್‌ರೌಂಡ್ ಆಟದ ಬಲದಿಂದ ಆಸ್ಟ್ರೇಲಿಯಾ ಏಳು ರನ್‌ಗಳಿಂದ ಗೆದ್ದಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3–1ರ ಮುನ್ನಡೆ ಗಳಿಸಿತು. ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 188 ರನ್ ಗಳಿಸಿತು. ಭಾರತ 20 ಓವರ್‌ಗಳಲ್ಲಿ 181 ರನ್ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 188 (ಅಲಿಸ್ಸಾ ಹೀಲಿ 30, ಆ್ಯಶ್ಲಿ ಗಾರ್ಡನರ್ 42, ಎಲಿಸಾ ಪೆರಿ ಔಟಾಗದೆ 72, ಗ್ರೇಸ್ ಹ್ಯಾರಿಸ್‌ 27; ದೀಪ್ತಿ ಶರ್ಮಾ 35ಕ್ಕೆ 2, ರಾಧಾ ಯಾದವ್‌ 26ಕ್ಕೆ 1). ಭಾರತ: 20 ಓವರ್‌ಗಳಲ್ಲಿ 181 (ಶಫಾಲಿ ವರ್ಮಾ 20, ಹರ್ಮನ್‌ಪ್ರೀತ್ ಕೌರ್ 46, ದೇವಿಕಾ ವೈದ್ಯ 32, ರಿಚಾ ಘೋಷ್‌ 40; ಡಾರ್ಸಿ ಬ್ರೌನ್‌ 33ಕ್ಕೆ 1,ಆ್ಯಶ್ಲಿ ಗಾರ್ಡನರ್ 20ಕ್ಕೆ 2, ಅಲಾನಾ ಕಿಂಗ್‌ 23ಕ್ಕೆ 2). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ ಏಳು ರನ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.