ಯಶಸ್ವಿ, ಅಜಿಂಕ್ಯ ಶತಕ ಸಂಭ್ರಮ ಮುಂಬೈ: ಭಾರತ ತಂಡಕ್ಕೆ ಮರಳುವ ಛಲದಲ್ಲಿರುವ ಅಜಿಂಕ್ಯ ರಹಾನೆ ಮತ್ತು ಯುವಪ್ರತಿಭೆ ಯಶಸ್ವಿ ಜೈಸ್ವಾಲ್ ಮಂಗಳವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಶತಕ ದಾಖಲಿಸಿದರು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಯಶಸ್ವಿ (162; 195ಎ, 4X27, 6X1) ಮತ್ತು ಅಜಿಂಕ್ಯ (ಬ್ಯಾಟಿಂಗ್ 139; 190ಎ, 4X18, 6X2) ಅವರ ಶತಕಗಳ ಬಲದಿಂದ ತಂಡವು 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 457 ರನ್‌ ಗಳಿಸಿದರು. ಭಾರತ ತಂಡದ ‘360 ಡಿಗ್ರಿ’ ಬ್ಯಾಟರ್ ಖ್ಯಾತಿಯ ಸೂರ್ಯಕುಮಾರ್ ಯಾದವ್ 80 ಎಸೆತಗಳಲ್ಲಿ 90 ರನ್ ಗಳಿಸಿದರು. ಅದರಲ್ಲಿ 15 ಬೌಂಡರಿ ಮತ್ತು ಸಿಕ್ಸರ್ ಇದ್ದವು. ಸಂಕ್ಷಿಪ್ತ ಸ್ಕೋರು: ಎ ಗುಂಪು (ವಡೋದರ): ಬರೋಡ: 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 370 (ಜ್ಯೋತ್ಸನಿಲ್ ಸಿಂಗ್ ಬ್ಯಾಟಿಂಗ್ 186, ಪ್ರತ್ಯೂಷ್ ಕುಮಾರ್ 110, ವಿಷ್ಣು ಸೋಳಂಕಿ ಬ್ಯಾಟಿಂಗ್ 60, ಸಂಜಯ್ ಪೆಹಲ್ 54ಕ್ಕೆ2) ಹರಿಯಾಣ ವಿರುದ್ಧ. (ಡೆಹರಾಡೂನ್): ಒಡಿಶಾ: 76.1 ಓವರ್‌ಗಳಲ್ಲಿ 213 (ಅನುರಾಗ್ ಸಾರಂಗಿ 27, ಸಾಮಂತ್ರೆ 46, ಕಾರ್ತಿಕ್ ಬಿಸ್ವಾಲ್ 48, ಅಭಿಷೇ‌ಕ್ ರಾವುತ್ 32, ರಾಜೇಶರ್ ಧೂಪರ್ 21, ದೀಪಕ್ ಧಪೊಲಾ 47ಕ್ಕೆ2, ಮಯಂಕ್ ಮಿಶ್ರಾ 39ಕ್ಕೆ3, ಸ್ವಪ್ನೀಲ್ ಸಿಂಗ್ 48ಕ್ಕೆ4) ಉತ್ತರಾಖಂಡ: 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 4. ಬಿ ಗುಂಪು (ಮುಂಬೈ): 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 457 (ಯಶಸ್ವಿ ಜೈಸ್ವಾಲ್ 162, ಸೂರ್ಯಕುಮಾರ್ ಯಾದವ್ 90, ಅಜಿಂಕ್ಯ ರಹಾನೆ ಬ್ಯಾಟಿಂಗ್ 139, ಸರ್ಫರಾಜ್ ಖಾನ್ ಬ್ಯಾಟಿಂಗ್ 40,ಮೆಹೊತ್ರಾ ಶಶಾಂಕ್ 87ಕ್ಕೆ2) ಹೈದರಾಬಾದ್ ವಿರುದ್ಧ. (ಕೊಯಂಬತ್ತೂರ್) ಆಂಧ್ರ: 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 277 (ಅಭಿಷೇಕ್ ರೆಡ್ಡಿ 85, ಶೇಖ್ ರಶೀದ್ 37, ರಿಕಿ ಭುಯ್ 68, ಕರಣ್ ಶಿಂಧೆ ಬ್ಯಾಟಿಂಗ್ 55, ರವಿಶ್ರೀನಿವಾಸನ್ ಸಾಯಿಕಿಶೋರ್ 73ಕ್ಕೆ2) ತಮಿಳುನಾಡು ವಿರುದ್ಧ. (ರಾಜ್‌ಕೋಟ್) ಮಹಾರಾಷ್ಟ್ರ: 89 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 253 (ಋತುರಾಜ್ ಗಾಯಕವಾಡ್ 65, ರಾಹುಲ್ ತ್ರಿಪಾಠಿ 34, ನೌಶಾದ್ ಶೇಖ್ ಬ್ಯಾಟಿಂಗ್ 93, ಅಂಕಿತ್ ಭಾವ್ನೆ ಬ್ಯಾಟಿಂಗ್ 61). ಸಿ ಗುಂಪು (ಪಾಲಂ, ದೆಹಲಿ): ಸರ್ವಿಸಸ್: 60.1 ಓವರ್‌ಗಳಲ್ಲಿ 213 (ಅನ್ಷುಲ್ ಗುಪ್ತಾ 71, ದೇವೆಂದರ್ ಲೊಹಚಾಬ್ 53, ದಿವೇಶ್ ಪಠಾಣಿಯಾ 26, ರವಿ ಚೌಹಾಣ 26, ರವಿಕಿರಣ 44ಕ್ಕ5, ಅಜಯ್ ಮಂಡಲ್ 20ಕ್ಕೆ3) ಛತ್ತೀಸಗಢ: 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 9. ಜೆಮ್ಶೆಡ್‌ಪುರ: ಜಾರ್ಖಂಡ್: 90 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 280 (ಕುಮಾರ ದೇವವ್ರತ್ 30, ಉತ್ಕರ್ಷ್ ಸಿಂಗ್ 33, ಕುಮಾರ್ ಸೂರಜ್ 48, ವಿರಾಟ್ ಸಿಂಗ್ 32, ಸೌರಭ್ ತಿವಾರಿ ಬ್ಯಾಟಿಂಗ್ 65, ಕುಮಾರ್ ಖುಷಾಗ್ರ ಬ್ಯಾಟಿಂಗ್ 60, ಮೋಹಿತ್ ರೆಡ್ಕರ್ 92ಕ್ಕೆ2, ದರ್ಶನ್ ಮಿಸಾಲ್ 59ಕ್ಕೆ2) ಗೋವಾ ವಿರುದ್ಧ. (ಜೈಪುರ): ರಾಜಸ್ಥಾನ: 87 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 310 (ಯಶ್ ಕೊಠಾರಿ 58, ದೀಪಕ್ ಹೂಡಾ 133, ಸಲ್ಮಾನ್ ಖಾನ್ ಬ್ಯಾಟಿಂಗ್ 62, ಜಲಜ್ ಸಕ್ಸೆನಾ 74ಕ್ಕ2)ಕೇರಳ ವಿರುದ್ಧ. ಡಿ ಗುಂಪು: (ಇಂದೋರ್): ಮಧ್ಯಪ್ರದೇಶ: 88 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 289 (ಯಶ್ ದುಬೆ 44, ರಜತ್ ಪಾಟೀದಾರ್ 88, ಅಕ್ಷತ್ ರಘುವಂಶಿ 65, ಸಾರಾಂಶ್ ಜೈನ್ 24, ಅನುಭವ್ ಅಗರವಾಲ್ 25, ಸಂದೀಪ್ ಶರ್ಮಾ 81ಕ್ಕೆ5, ಹರತೇಜಸ್ವಿ ಕಪೂರ್ 64ಕ್ಕೆ2) ಚಂಡೀಗಢ ವಿರುದ್ಧ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.