ಚಿನ್ನಸ್ವಾಮಿ ಅಂಗಳದಲ್ಲಿ ಕರ್ನಾಟಕ ಶತಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುದುಚೇರಿ ಎದುರು ಮಂಗಳವಾರ ಪುದುಚೇರಿ ವಿರುದ್ಧಆರಂಭವಾದ ರಣಜಿ ಪಂದ್ಯವು ಕರ್ನಾಟಕಕ್ಕೆ ನೂರನೇ ಪಂದ್ಯವಾಗಿದೆ. ‘ಇದೊಂದು ಐತಿಹಾಸಿಕ ಪಂದ್ಯವಾಗಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಇದುವರೆಗೆ ಒಟ್ಟು 102 ರಣಜಿ ಪಂದ್ಯಗಳಾಗಿವೆ. ಅದರಲ್ಲಿ ಇದು ಕರ್ನಾಟಕಕ್ಕೆ ನೂರನೇಯದ್ದು. ಇನ್ನೆರಡು ಪಂದ್ಯಗಳಲ್ಲಿ ಹೊರರಾಜ್ಯದ ತಂಡಗಳು ಆಡಿವೆ. 2008–09ರ ಋತುವಿನಲ್ಲಿ ಇಲ್ಲಿ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಬಂಗಾಳ ಮತ್ತು ತಮಿಳುನಾಡು, ಹೋದ ವರ್ಷ ನಡೆದಿದ್ದ ಫೈನಲ್‌ನಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ಮುಖಾಮುಖಿಯಾಗಿದ್ದವು’ ಎಂದು ಕ್ರಿಕೆಟ್ ಅಂಕಿ–ಅಂಶ ಪರಿಣತ ಚನ್ನಗಿರಿ ಕೇಶವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.