ಕ್ರಿಕೆಟ್: ಆ್ಯಷ್ಲೆ, ಗ್ರೇಸ್ ಅಬ್ಬರಕ್ಕೆ ಒಲಿದ ಜಯ: ಆಸ್ಟ್ರೇಲಿಯಾಕ್ಕೆ ಸರಣಿ ಮುಂಬೈ: ಆ್ಯಷ್ಲೆ ಗಾರ್ಡನರ್ ಮತ್ತು ಗ್ರೇಸ್ ಹ್ಯಾರಿಸ್ ಅವರ ಅಬ್ಬರದ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು ಮಂಗಳವಾರ ಇಲ್ಲಿ ನಡೆದ ಟಿ20 ಮಹಿಳಾ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಗಾರ್ಡನರ್ (ಔಟಾಗದೆ 66; 32ಎ) ಮತ್ತು ಗ್ರೇಸ್ (ಔಟಾಗದೆ 64, 35ಎ) ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 195 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 20 ಓವರ್‌ಗಳಲ್ಲಿ 142 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆಸ್ಟ್ರೇಲಿಯಾ ವನಿತೆಯರು 54 ರನ್‌ಗಳಿಂದ ಗೆದ್ದರು. ತಂಡವು 4–1ರಿಂದ ಸರಣಿಯಲ್ಲಿ ಜಯಸಾಧಿಸಿತು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 196 (ತಹಿಲಾ ಮೆಕ್‌ಗ್ರಾ 26, ಆ್ಯಷ್ಲೆ ಗಾರ್ಡನರ್ ಔಟಾಗದೆ 66, ಗ್ರೇಸ್ ಹ್ಯಾರಿಸ್ ಔಟಾಗದೆ 64, ಅಂಜಲಿ ಸರವಣಿ 30ಕ್ಕೆ1) ಭಾರತ: 20 ಓವರ್‌ಗಳಲ್ಲಿ 142 (ಹರ್ಲೀನ್ ಡಿಯೊಲ್ 24, ದೀಪ್ತಿ ಶರ್ಮಾ 53, ಆ್ಯಷ್ಲೆ ಗಾರ್ಡನರ್ 20ಕ್ಕೆ2, ಹೀಥರ್ ಗ್ರಹಾಂ 8ಕ್ಕೆ4) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 54 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.