ಟೆಸ್ಟ್ ರ‍್ಯಾಂಕಿಂಗ್‌: ಅಕ್ಷರ್, ಕುಲದೀಪ್‌ಗೆ ಬಡ್ತಿ ದುಬೈ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಅಕ್ಷರ್ ಪಟೇಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್‌ ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬೌಲರ್‌ಗಳ ವಿಭಾಗದಲ್ಲಿಭಾರಿ ಬಡ್ತಿ ಪಡೆದಿದ್ದಾರೆ. ಬುಧವಾರ ಪ್ರಕಟವಾದ ಕ್ರಮಾಂಕಪಟ್ಟಿಯಲ್ಲಿ ಅಕ್ಷರ್ 20 ಸ್ಥಾನ ಬಡ್ತಿ ಪಡೆದು ಜೀವನಶ್ರೇಷ್ಠ 18ನೇ ಸ್ಥಾನ ತಲುಪಿದ್ದಾರೆ. 19 ಸ್ಥಾನ ಏರಿಕೆ ಕಂಡಿರುವ ಕುಲದೀಪ್ ಯಾದವ್‌ 49ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್ ನೀಡಿ 13 ವಿಕೆಟ್‌ ಕಬಳಿಸಿದ್ದ ಕುಲದೀಪ್ ಅವರ ಬಳಿ ಸದ್ಯ 455 ರೇಟಿಂಗ್ ಪಾಯಿಂಟ್‌ಗಳಿವೆ. ಅದೇ ಪಂದ್ಯದಲ್ಲಿ ಐದು ವಿಕೆಟ್‌ ಗಳಿಸಿದ್ದ ಅಕ್ಷರ್ 650 ಪಾಯಿಂಟ್ಸ್ ಕಲೆಹಾಕಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜಸ್‌ಪ್ರೀತ್ ಬೂಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ಚೇತೇಶ್ವರ್ ಪೂಜಾರ ಮತ್ತು ಶುಭಮನ್ ಗಿಲ್‌ ಕ್ರಮವಾಗಿ 16 ಮತ್ತು 54ನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.