ಪಾಕಿಸ್ತಾನ: ಶಕೀಲ್‌ ಚೊಚ್ಚಲ ಶತಕ ಕರಾಚಿ: ಎಡಗೈ ಬ್ಯಾಟರ್ ಸೌದ್‌ ಶಕೀಲ್ (ಬ್ಯಾಟಿಂಗ್‌ 124) ಗಳಿಸಿದ ಚೊಚ್ಚಲ ಶತಕದ ಬಲದಿಂದ ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ ಎದುರಿನ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪೇರಿಸಿತು. ಬುಧವಾರ ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 9 ವಿಕೆಟ್‌ ಕಳೆದುಕೊಂಡು 407 ರನ್‌ ಗಳಿಸಿತು. ಶಕೀಲ್ ಹಾಗೂ ಖಾತೆ ತೆರೆಯದ ಅಬ್ರಾರ್ ಅಹಮದ್‌ ಕ್ರೀಸ್‌ನಲ್ಲಿದ್ದರು. 3 ವಿಕೆಟ್‌ಗೆ 154 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಪಾಕಿಸ್ತಾನದ ಪರ ಇಮಾಮ್‌ ಉಲ್‌ ಹಕ್‌ 83 ರನ್‌ ಗಳಿಸಿ ಔಟಾದರು. ಅವರೊಂದಿಗೆ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಶಕೀಲ್‌ 83 ರನ್‌ಗಳ ಜೊತೆಯಾಟವಾಡಿದರೆ, ಐದನೇ ವಿಕೆಟ್‌ಗೆ ಸರ್ಫರಾಜ್‌ ಅಹಮದ್‌ (78) ಅವರೊಂದಿಗೆ ಅಮೂಲ್ಯ 150 ರನ್‌ಗಳನ್ನು ಪೇರಿಸಿದರು. 336 ಎಸೆತಗಳನ್ನು ಎದುರಿಸಿದ ಶಕೀಲ್ ಅವರ ಇನಿಂಗ್ಸ್‌ನಲ್ಲಿ 17 ಬೌಂಡರಿಗಳಿದ್ದವು. ನ್ಯೂಜಿಲೆಂಡ್‌ ಪರ ಎಜಾಜ್ ಪಟೇಲ್ (88 ಕ್ಕೆ 3) ಮತ್ತು ಇಶ್ ಸೋಧಿ (94ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌: 131 ಓವರ್‌ಗಳಲ್ಲಿ 449: ಪಾಕಿಸ್ತಾನ: 132 ಓವರ್‌ಗಳಲ್ಲಿ 9ಕ್ಕೆ 407 (ಇಮಾಮ್ ಉಲ್ ಹಕ್‌ ಬ್ಯಾಟಿಂಗ್‌ 83, ಸೌದ್‌ ಶಕೀಲ್ ಬ್ಯಾಟಿಂಗ್‌ 124, ಸರ್ಫರಾಜ್ ಅಹಮದ್‌ 78, ಆಘಾ ಸಲ್ಮಾನ್‌ 41; ಟಿಮ್ ಸೌಥಿ 62ಕ್ಕೆ 1, ಮ್ಯಾಟ್ ಹೆನ್ರಿ 58ಕ್ಕೆ 1, ಎಜಾಜ್ ಪಟೇಲ್‌ 88ಕ್ಕೆ 3, ಇಶ್ ಸೋಧಿ 94ಕ್ಕೆ 2. ಡೆರಿಲ್ ಮಿಚೆಲ್‌ 11ಕ್ಕೆ 1). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.