ಪಿಸಿಬಿ ಆಯ್ಕೆ ಸಮಿತಿ: ಆಫ್ರಿದಿ ಮುಖ್ಯಸ್ಥ ಕರಾಚಿ (ಪಿಟಿಐ): ಮಾಜಿ ನಾಯಕ ಶಾಹಿದ್‌ ಆಫ್ರಿದಿ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆಯ್ಕೆ ಸಮಿತಿಯ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮಾಜಿ ಆಟಗಾರರಾದ ಅಬ್ದುಲ್‌ ರಜಾಕ್, ರಾವ್‌ ಇಫ್ತಿಕಾರ್‌ ಅಹಮದ್‌ ಮತ್ತು ಹಾರೂನ್ ರಶೀದ್‌ ಅವರನ್ನೊಳಗೊಂಡ ಮಧ್ಯಂತರ ಆಯ್ಕೆ ಸಮಿತಿಯನ್ನು ಆಫ್ರಿದಿ ಮುನ್ನಡೆಸಲಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್‌ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ. ಈ ಸರಣಿ ಸೋಮವಾರ ಆರಂಭವಾಗಲಿದೆ. ಪಿಸಿಬಿ ಆಡಳಿತ ನೋಡಿಕೊಳ್ಳಲು ನೇಮಿಸಿರುವ 14 ಸದಸ್ಯರ ಸಮಿತಿಯಲ್ಲಿ ಆಫ್ರಿದಿ ಮತ್ತು ಹಾರೂನ್ ಇದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಮುಹಮ್ಮದ್‌ ವಸೀಮ್‌ ಅವರನ್ನು 14 ಸದಸ್ಯರ ಸಮಿತಿ ಶುಕ್ರವಾರ ವಜಾಗೊಳಿಸಿತ್ತು. ವಸೀಮ್‌ ನೇತೃತ್ವದ ಸಮಿತಿಯು ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ 16ರ ಸದಸ್ಯರ ಪಾಕ್‌ ತಂಡವನ್ನು ಗುರುವಾರವಷ್ಟೇ ಪ್ರಕಟಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.