ಡೇವಿಡ್‌ ಕಪ್‌: ಶಶಿಕುಮಾರ್‌ಗೆ ಸ್ಥಾನ ನವದೆಹಲಿ (ಪಿಟಿಐ): ಯುವ ಆಟಗಾರ ಶಶಿಕುಮಾರ್ ಮುಕುಂದ್‌ ಅವರು ಡೇವಿಸ್‌ ಕಪ್‌ ಟೆನಿಸ್‌ ವಿಶ್ವಗುಂಪು–1 ಟೂರ್ನಿಯ ಡೆನ್ಮಾರ್ಕ್ ವಿರುದ್ದದ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಡೆನ್ಮಾರ್ಕ್‌ನ ಹಿಲರ್ಡ್‌ನಲ್ಲಿ ಫೆ. 3 ಮತ್ತು 4 ರಂದು ನಡೆಯಲಿರುವ ಪಂದ್ಯಕ್ಕೆ ಐವರು ಸದಸ್ಯರ ಭಾರತ ತಂಡವನ್ನು ಎಐಟಿಎ ಶನಿವಾರ ಪ್ರಕಟಿಸಿತು. ಅನುಭವಿ ಆಟಗಾರರಾದ ರೋಹನ್‌ ಬೋಪಣ್ಣ, ಯೂಕಿ ಭಾಂಬ್ರಿ, ರಾಮಕುಮಾರ್ ರಾಮನಾಥನ್‌ ಮತ್ತು ಪ್ರಜ್ಞೇನ್‌ ಗುಣೇಶ್ವರನ್‌ ಅವರು ತಂಡದಲ್ಲಿದ್ದಾರೆ. ಸುಮಿತ್‌ ನಗಾಲ್‌ ಹೆಚ್ಚುವರಿ ಆಟಗಾರರಾಗಿದ್ದಾರೆ. ಈಚೆಗಿನ ಪ್ರದರ್ಶನ ಮತ್ತು ಪಂದ್ಯದ ವೇಳೆ ಆಟಗಾರರ ಲಭ್ಯತೆಯನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಎಐಟಿಎ ತಿಳಿಸಿದೆ. ನಂದ‌ನ್‌ ಬಾಲ್‌ ನೇತೃತ್ವದ ಅಯ್ಕೆ ಸಮಿತಿಯು ವರ್ಚುವಲ್‌ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಿದೆ. ಮಾರ್ಚ್‌ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಮೊದಲ ಹಂತದ ಪಂದ್ಯದಲ್ಲಿ ಭಾರತ 4–0 ರಲ್ಲಿ ಡೆನ್ಮಾರ್ಕ್‌ ವಿರುದ್ಧ ಗೆದ್ದಿತ್ತು. ಬಳಿಕ ನಡೆದಿದ್ದ ‘ಅವೇ’ ಪಂದ್ಯದಲ್ಲಿ ನಾರ್ವೆ ಕೈಯಲ್ಲಿ 1–3 ರಲ್ಲಿ ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.