ವಿಶ್ವ ಚೆಸ್: ಹಿಜಾಬ್ ಇಲ್ಲದೇ ಸ್ಪರ್ಧಿಸಿದ ಇರಾನ್ ಮಹಿಳೆ ದುಬೈ (ರಾಯಿಟರ್ಸ್): ಇರಾನ್ ದೇಶದ ಚೆಸ್ ಆಟಗಾರ್ತಿಯೊಬ್ಬರು ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಹಿಜಾಬ್ ಧರಿಸದೇ ಸ್ಪರ್ಧಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಇರಾನ್‌ನಲ್ಲಿ ಹಿಜಾಬ್ ಕಡ್ಡಾಯ ನಿಯಮ ವಿರೋಧಿಸಿರುವ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಾರಾ ಖಾದೀಮ್ ಅವರು ಫಿಡೆ ವಿಶ್ವ ರ‍್ಯಾಪಿಡ್ ಹಾಘೂ ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ಹಿಜಾಬ್ ಇಲ್ಲದೇ ಭಾಗವಹಿಸಿದರು ಎಂದು ವರದಿಯಾಗಿದೆ. ಅಲ್ಮಾಟಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅವರು ಆಡುತ್ತಿದ್ದಾರೆ. ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 804ನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.