ಕ್ರಿಕೆಟ್: ಹೊಯ್ಸಳ ತಂಡಕ್ಕೆ ಪ್ರಶಸ್ತಿ ತೋವಿನಕೆರೆ: ಕೋರಾ ಹೋಬಳಿಯ ನಂದಿಹಳ್ಳಿಯಲ್ಲಿ ಮೂರು ದಿನಗಳ ಕಾಲ ನಡೆದ ಲೀಗ್ ಮಾದರಿ ಕ್ರಿಕೆಟ್ ಟೂರ್ನಿಯಲ್ಲಿ ತೋವಿನಕೆರೆ ಹೊಯ್ಸಳ ತಂಡ ಪ್ರಥಮ ಸ್ಥಾನ ಪಡೆದಿದೆ. ನಂದಿಹಳ್ಳಿ ಪ್ರೀಮಿಯರ್ ಲೀಗ್ ಸೀಸನ್ 1ರಲ್ಲಿ ಸ್ಥಳೀಯ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡು ಹಲವು ತಂಡಗಳನ್ನು ವಿವಿಧ ಹೆಸರಿನಡಿ ರಚಿಸಲಾಗಿತ್ತು. ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿದ್ದವು. ದ್ವಿತೀಯ ಸ್ಥಾನವನ್ನು ಅಜ್ಜೇನಹಳ್ಳಿ ದಶಾನನ ಮತ್ತು ತೃತೀಯ ಸ್ಥಾನವನ್ನು ನಂದಿಹಳ್ಳಿ ತಂಡ ಪಡೆಯಿತು.ಪ್ರಥಮ ₹ 50 ಸಾವಿರ, ದ್ವಿತೀಯ ₹ 25 ಸಾವಿರ ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ ₹ 15 ಸಾವಿರ ಬಹುಮಾನ ವಿತರಿಸಲಾಯಿತು. ಶಾಸಕ ಡಾ.ಜಿ. ಪರಮೇಶ್ವರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಆರ್. ಕಾಮರಾಜು, ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್, ಅನಿಲ್ ಕುಮಾರ್, ಮುನಿಯಪ್ಪ ಮತ್ತು ತೋವಿನಕೆರೆ ಟಿ.ಡಿ. ಪ್ರಸನ್ನಕುಮಾರ್,ನಂದಿಹಳ್ಳಿ ವರದರಾಜು ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.