ಕೇನ್‌, ಲಥಾಮ್‌ ಶತಕದ ಸೊಬಗು ಕರಾಚಿ: ಕೇನ್‌ ವಿಲಿಯಮ್ಸನ್‌ ಮತ್ತು ಟಾಮ್‌ ಲಥಾಮ್‌ ಶತಕಗಳ ಬಲದಿಂದ ನ್ಯೂಜಿಲೆಂಡ್‌ ತಂಡವು ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ. ಕರಾಚಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಬುಧವಾರದ ಆಟದ ಅಂತ್ಯಕ್ಕೆನ್ಯೂಜಿಲೆಂಡ್‌, ಆರು ವಿಕೆಟ್‌ಗೆ 440 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಎರಡು ರನ್‌ಗಳ ಮುನ್ನಡೆ ಸಾಧಿಸಿದೆ. ಮಂಗಳವಾರ ವಿಕೆಟ್‌ ನಷ್ಟವಿಲ್ಲದೆ 165 ರನ್ ಗಳಿಸಿದ್ದ ನ್ಯೂಜಿಲೆಂಡ್‌ ಪರ, ಲಥಾಮ್ (113) ಹಾಗೂ ಡೆವೊನ್ ಕಾನ್ವೆ (92) ಮೊದಲ ವಿಕೆಟ್‌ ಜೊತೆಯಾಟದಲ್ಲಿ 183 ರನ್ ಸೇರಿಸಿದರು. ಬಳಿಕ ವಿಲಿಯಮ್ಸನ್‌ (ಬ್ಯಾಟಿಂಗ್ 105) ಕೊಡುಗೆ ನೀಡಿದರು. ವಿಲಿಯಮ್ಸನ್‌ ಅವರು ಟೆಸ್ಟ್‌ನಲ್ಲಿ 25ನೇ ಶತಕ ಗಳಿಸಿದರೆ, ಲಥಾಮ್‌ 13ನೇ ಶತಕ ದಾಖಲಿಸಿದರು. ಎರಡು ಜೀವದಾನಗಳ ಅವಕಾಶ ಪಡೆದ ವಿಲಿಯಮ್ಸನ್‌ ಅವರ ಇನಿಂಗ್ಸ್‌ನಲ್ಲಿ 11 ಬೌಂಡರಿಗಳಿದ್ದವು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ 130.5 ಓವರ್‌ಗಳಲ್ಲಿ 438. ನ್ಯೂಜಿಲೆಂಡ್‌ 136 ಓವರ್‌ಗಳಲ್ಲಿ 6ಕ್ಕೆ 440 (ಟಾಮ್‌ ಲಥಾಮ್‌ 113, ಡೆವೊನ್‌ ಕಾನ್ವೆ 92, ಕೇನ್ ವಿಲಿಯಮ್ಸನ್‌ ಬ್ಯಾಟಿಂಗ್ 105, ಡೆರಿಲ್ ಮಿಚೆಲ್‌ 42, ಟಾಮ್ ಬ್ಲಂಡೆಲ್‌ 47; ಮೊಹಮ್ಮದ್ ವಾಸೀಂ 81ಕ್ಕೆ 1, ಅಬ್ರಾರ್ ಅಹಮದ್‌ 143ಕ್ಕೆ 3, ನೂಮಾನ್ ಅಲಿ 137ಕ್ಕೆ 2). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.