ರಣಜಿ ಕ್ರಿಕೆಟ್: ಜಲಜ್‌ಗೆ ಐದು ವಿಕೆಟ್ ತಿರುವನಂತಪುರ: ಕೇರಳ ತಂಡದ ಆಫ್‌ಬ್ರೇಕ್ ಬೌಲರ್ ಜಲಜ್ ಸಕ್ಸೆನಾ (48ಕ್ಕೆ5) ಅವರ ಅಮೋಘ ಬೌಲಿಂಗ್‌ನಿಂದಾಗಿ ಮಂಗಳವಾರ ಇಲ್ಲಿ ಆರಂಭವಾದ ರಣಜಿ ಪಂದ್ಯದಲ್ಲಿ ಛತ್ತೀಸಗಢ ಬ್ಯಾಟಿಂಗ್ ಪಡೆ ಕುಸಿಯಿತು. ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಛತ್ತೀಸಗಢ ತಂಡವು 49.5 ಓವರ್‌ಗಳಲ್ಲಿ 149 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಇದಕ್ಕುತ್ತರವಾಗಿ ಕೇರಳ ತಂಡವು ದಿನದಾಟದ ಕೊನೆಗೆ 38 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 100 ರನ್ ಗಳಿಸಿದೆ. ಸಂಕ್ಷಿಪ್ತ ಸ್ಕೋರು: ಎ ಗುಂಪು: ದಿಮಾಪುರ್: ನಾಗಾಲ್ಯಾಂಡ್: 62 ಓವರ್‌ಗಳಲ್ಲಿ 9 ಕ್ಕೆ 166 (ರಂಗಸೆನ್ ಜೊನಾಥನ್ 25, ಚೇತನ್ ಬಿಷ್ಟ್ 64, ಪ್ರದೀಪ್ತ ಪ್ರಾಮಾಣಿಕ್ 43ಕ್ಕೆ5) ಬಂಗಾಳ ಎದುರು. ಬಿ ಗುಂಪು: ದೆಹಲಿ: 76 ಓವರ್‌ಗಳಲ್ಲಿ 6ಕ್ಕೆ212 (ಧ್ರುವ ಶೋರೆ 67, ಜಾಂಟಿ ಸಿಧು 57, ಹಿಮ್ಮತ್ ಸಿಂಗ್ 25, ಲಲಿತ್ ಯಾದವ್ ಬ್ಯಾಟಿಂಗ್ 33, ಎಲ್. ವಿಘ್ನೇಷ್ 42ಕ್ಕೆ3, ಸಂದೀಪ್ ವಾರಿಯರ್ 59ಕ್ಕೆ3) ವಿರುದ್ಧ ತಮಿಳುನಾಡು. ಸೌರಾಷ್ಟ್ರ: 79.1 ಓವರ್‌ಗಳಲ್ಲಿ 289 (ಜೈ ಗೋಹಿಲ್ 24, ಶೇಲ್ಡನ್ ಜಾಕ್ಸನ್ 47, ವಸವದಾ 75, ಪ್ರೇರಕ್ ಮಂಕಡ್ 27, ಪಾರ್ಥ್ ಭೂತ್ 25, ಧರ್ಮೇಂದ್ರಸಿಂಹ ಜಡೇಜ 24, ತುಷಾರ್ ದೇಶಪಾಂಡೆ 36ಕ್ಕೆ2, ಶಮ್ಸ್ ಮುಲಾನಿ 109ಕ್ಕೆ4, ಶಶಾಂಕ್ ಅತಾರ್ಡೆ 77ಕ್ಕೆ2) ಮುಂಬೈ: 8 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 36 (ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ 18, ಅಜಿಂಕ್ಯ ರಹಾನೆ ಬ್ಯಾಟಿಂಗ್ 12) ಸಿ ಗುಂಪು: ಪುದುಚೇರಿ ಮೈದಾನ: ರಾಜಸ್ಥಾನ: 82 ಓವರ್‌ಗಳಲ್ಲಿ 9ಕ್ಕೆ333 (ಮಹಿಪಾಲ್ ಲೊಮ್ರೊರ್ 32, ದೀಪಕ್ ಹೂಡಾ 94, ಮಾನವ್ ಸುತಾರ್ ಬ್ಯಾಟಿಂಗ್ 95, ತನ್ವೀರ್ ಉಲ್ ಹಕ್ ಬ್ಯಾಟಿಂಗ್ 25, ಸಾಗರ್ ಉದೇಶಿ 77ಕ್ಕೆ3, ದಾಮೋದರನ್ ರೋಹಿತ್ 55ಕ್ಕೆ2, ಸಂತೋಷ್ ರತ್ನಪಕ್ಸೆ 36ಕ್ಕೆ2) ತಿರುವನಂತಪುರ: ಛತ್ತೀಸಗಢ: 49.5 ಓವರ್‌ಗಳಲ್ಲಿ 149 (ಹರಪ್ರೀತ್ ಸಿಂಗ್ 40, ಮಯಂಕ್ ಯಾದವ್ ಔಟಾಗದೆ 29, ಜಲಜ್ ಸಕ್ಸೆನಾ 48ಕ್ಕೆ5, ಸಚಿನ್ ಬೇಬಿ 4ಕ್ಕೆ2) ಕೇರಳ: 38 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 100(ಪೂನಂ ರಾಹುಲ್ 24, ರೋಹನ್ ಕಣ್ಣುಮಲ್ 31, ರೋಹನ್ ಪ್ರೇಮ್ ಬ್ಯಾಟಿಂಗ್ 29, ಸೌರಭ್ ಮಜುಂದಾರ್ 22ಕ್ಕೆ1) ಡಿ ಗುಂಪು: ಚಂಡೀಗಢ: 90 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 247 (ಅರ್ಸಲನ್ ಖಾನ್ 56, ಅರ್ಜಿತ್ ಪನ್ನು 32, ಗೌರವ್ ಪುರಿ 51, ಭಗಮೇಂದರ್ ಲೆಥರ್ ಬ್ಯಾಟಿಂಗ್ 68, ಶೇನ್ ಪಟೇಲ್ 77ಕ್ಕೆ4) ವಿರುದ್ಧ ಗುಜರಾತ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.