ಮಹಿಳಾ ಐಪಿಎಲ್: ತಂಡಗಳ ಖರೀದಿಗೆ ಬಿಡ್‌ ಆಹ್ವಾನ ನವದೆಹಲಿ: ಇದೇ ವರ್ಷ ಆಯೋಜಿಸಲು ಉದ್ದೇಶಿಸಲಾಗಿರುವ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (ಡಬ್ಲ್ಯುಐಪಿಎಲ್) ಟೂರ್ನಿಯಲ್ಲಿ ಆಡುವ ತಂಡಗಳನ್ನು ಖರೀದಿಸಲು ಬಿಡ್ ಆಹ್ವಾನಿಸಲಾಗಿದೆ. ಇದೇ ಮಾರ್ಚ್‌ 3ರಿಂದ 26ರವರೆಗೆ ಟೂರ್ನಿ ನಡೆಸಲು ಉದ್ದೇಶಿಸಲಾಗಿದೆ. ‘ಐಪಿಎಲ್‌ನ ಆಡಳಿತ ಸಮಿತಿಯು ಟೆಂಡರ್ ಕರೆದಿದೆ. ಇದಕ್ಕಾಗಿ ಐಟಿಟಿ ನಿಗದಿಪಡಿಸಲಾಗಿದೆ. ಮರುಪಾವತಿಯಿಲ್ಲದ ₹ 5ಲಕ್ಷ ಶುಲ್ಕವನ್ನು ತುಂಬಿ ಐಟಿಟಿ ಪಡೆಯಬಹುದಾಗಿದೆ. ಜನವರಿ 21ರೊಳಗೆ ಬಿಡ್ ಸಲ್ಲಿಸಬೇಕು. ಅರ್ಹತಾ ನಿಯಮಗಳನ್ನು ಟೆಂಡರ್ ಅರ್ಜಿಯಲ್ಲಿ ನೀಡಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಟೂರ್ನಿಯ ಪ್ರಸಾರ ಹಕ್ಕುಗಳ ಐಟಿಟಿ ಸಲ್ಲಿಕೆಯು ಡಿಸೆಂಬರ್ 31ರಂದು ಕೊನೆಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.