ಕ್ರಿಕೆಟ್‌ ಟೆಸ್ಟ್‌: ಪಾಕ್ ಗೆಲುವಿಗೆ 319 ರನ್‌ ಗುರಿ ಕರಾಚಿ: ನ್ಯೂಜಿಲೆಂಡ್‌ ತಂಡ ಇಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂ‌ದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ 319 ರನ್‌ಗಳ ಗುರಿ ನೀಡಿದೆ. ಸಾಧಾರಣ ಗುರಿ ಬೆನ್ನಟ್ಟಿರುವ ಪಾಕಿಸ್ತಾನ ತಂಡ ರನ್‌ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದೆ. ಅಬ್ದುಲ್ಲಾ ಶಫೀಕ್‌ ಮತ್ತು ಮೀರ್‌ ಹಮ್ಜಾ ಅವರು ಶೂನ್ಯಕ್ಕೆ ಔಟಾದರು. ಇವರು ಕ್ರಮವಾಗಿ ಟಿಮ್‌ ಸೌಥಿ ಹಾಗೂ ಇಶ್‌ ಸೋದಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮ ದಿನವಾದ ಶುಕ್ರವಾರ ಗೆಲುವಿಗೆ 319 ರನ್‌ ಗಳಿಸುವ ಸವಾಲು ಪಾಕ್‌ ಮುಂದಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ 5 ವಿಕೆಟ್‌ಗಳಿಗೆ 277 ರನ್‌ ಗಳಿಸಿ ಎರಡನೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಟಮ್‌ ಲಥಾಮ್‌ (62), ಟಾಮ್‌ ಬ್ಲಂಡೆಲ್‌ (74) ಮತ್ತು ಮೈಕಲ್‌ ಬ್ರೇಸ್‌ವೆಲ್‌ (ಔಟಾಗದೆ 74) ಅವರು ಅರ್ಧಶತಕ ಗಳಿಸಿದರು. ಬ್ಲಂಡೆಲ್‌ ಮತ್ತು ಬ್ರೇಸ್‌ವೆಲ್‌ ಐದನೇ ವಿಕೆಟ್‌ಗೆ 127 ರನ್‌ ಸೇರಿಸಿದರು. ಕರಾಚಿಯಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯ ಡ್ರಾ ಆಗಿತ್ತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌: 131 ಓವರ್‌ಗಳಲ್ಲಿ 449: ಪಾಕಿಸ್ತಾನ: 133 ಓವರ್‌ಗಳಲ್ಲಿ 408. ಎರಡನೇ ಇನಿಂಗ್ಸ್‌: ನ್ಯೂಜಿಲೆಂಡ್‌ 82 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 277 ಡಿಕ್ಲೇರ್ಡ್‌ (ಟಾನ್‌ ಲಥಾಮ್‌ 62, ಕೇನ್‌ ವಿಲಿಯಮ್ಸನ್‌ 41, ಟಾಮ್‌ ಬ್ಲಂಡೆಲ್‌ 74, ಮೈಕಲ್‌ ಬ್ರೇಸ್‌ವೆಲ್‌ ಔಟಾಗದೆ 74, ಮೀರ್‌ ಹಮ್ಜಾ 38ಕ್ಕೆ 1) ಪಾಕಿಸ್ತಾನ: 2.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 0‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.