ರಣಜಿ ಕ್ರಿಕೆಟ್‌ | ಕೇರಳಕ್ಕೆ ಆಘಾತ ನೀಡಿದ ಗೋವಾ ತಿರುವನಂತಪುರ: ಆಫ್‌ಸ್ಪಿನ್ನರ್ ಮೋಹಿತ್ ರೆಡ್ಕರ್ (73ಕ್ಕೆ6) ಅಮೋಘ ಬೌಲಿಂಗ್ ಬಲದಿಂದ ಗೋವಾ ತಂಡವು ರಣಜಿ ಕ್ರಿಕೆಟ್‌ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಕೇರಳಕ್ಕೆ ಆಘಾತ ನೀಡಿತು. ಎರಡನೇ ಇನಿಂಗ್ಸ್‌ನಲ್ಲಿ ಕೇರಳ ತಂಡವನ್ನು 200 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಗೋವಾ ಸಫಲವಾಯಿತು. 155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗೋವಾ ತಂಡವನ್ನು ಇಶಾನ್ ಗಡೇಕರ್ (ಔಟಾಗದೆ 67) ಮತ್ತು ಸಿದ್ಧೇಶ್ ಲಾಡ್ (ಅಜೇಯ 33) ಗೆಲುವಿನ ದಡ ಸೇರಿಸಿದರು. ಟೂರ್ನಿಯಲ್ಲಿ ಗೋವಾ ತಂಡಕ್ಕೆ ಇದು ಮೊದಲ ಜಯ ಹಾಗೂ ಕೇರಳಕ್ಕೆ ಪ್ರಥಮ ಸೋಲು. ಸಂಕ್ಷಿಪ್ತ ಸ್ಕೋರು: ಸಿ ಗುಂಪು ತಿರುವನಂತಪುರ ಮೊದಲ ಇನಿಂಗ್ಸ್: ಕೇರಳ: 265, ಗೋವಾ 311 ಎರಡನೇ ಇನಿಂಗ್ಸ್: ಕೇರಳ 62.3 ಓವರ್‌ಗಳಲ್ಲಿ 200. ಗೋವಾ: 48.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 157 (ಅಮೋಘ ಸುನಿಲ್ ದೇಸಾಯಿ 23, ಇಶಾನ್ ಗಡೇಕರ್ ಔಟಾಗದೆ 67, ಸಿದ್ಧೇಶ್ ಲಾಡ್ ಔಟಾಗದೆ 33, ಜಲಜ್ ಸಕ್ಸೆನಾ 53ಕ್ಕೆ1) ಫಲಿತಾಂಶ: ಗೋವಾ ತಂಡಕ್ಕೆ 7 ವಿಕೆಟ್‌ಗಳ ಜಯ. ದೆಹಲಿ ಮೊದಲ ಇನಿಂಗ್ಸ್: ಪುದುಚೇರಿ 216, ಸರ್ವಿಸಸ್ 466 ಎರಡನೇ ಇನಿಂಗ್ಸ್: ಪುದುಚೇರಿ : 96.3 ಓವರ್‌ಗಳಲ್ಲಿ 313 (ಅರುಣ್ ಕಾರ್ತಿಕ್ 130, ಕೃಷ್ಣ ಪಾಂಡೆ 64, ದಿವೇಶ್ ಪಠಾಣಿಯಾ 83ಕ್ಕೆ3, ಅರ್ಪಿತ್ ಗುಲೇರಿಯಾ 75ಕ್ಕೆ2, ಪುಳಕಿತ್ ನಾರಂಗ್ 52ಕ್ಕೆ2, ರಾಹುಲ್ ಸಿಂಗ್ 37ಕ್ಕೆ2) ಸರ್ವಿಸಸ್: 13.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 67 (ರಾಹುಲ್ ಸಿಂಗ್ ಗೆಹ್ಲೋತ್ ಔಟಾಗದೆ 33, ಸಾಗರ್ ಉದೇಶಿ 20ಕ್ಕೆ3) ಫಲಿತಾಂಶ: ಸರ್ವಿಸಸ್ ತಂಡಕ್ಕೆ 5 ವಿಕೆಟ್‌ಗಳ ಜಯ. ಜೈಪುರ ಮೊದಲ ಇನಿಂಗ್ಸ್: ಜಾರ್ಖಂಡ್ 92, ರಾಜಸ್ಥಾನ: 287 ಎರಡನೇ ಇನಿಂಗ್ಸ್: ಜಾರ್ಖಂಡ್: 9ಕ್ಕೆ470 ಡಿಕ್ಲೇರ್ಡ್ (ಅನುಕೂಲ್ ರಾಯ್ 125, ವಿಕಾಶ್ ಸಿಂಗ್ ಔಟಾಗದೆ 20,ಸೌರಭ್ ತಿವಾರಿ 78, ಋತುರಾಜ್ ಸಿಂಗ್ 90ಕ್ಕೆ3, ತನ್ವೀರ್ ಉಲ್ ಹಕ್ 82ಕ್ಕೆ3) ರಾಜಸ್ಥಾನ: 33 ಓವರ್‌ಗಳಲ್ಲಿ 4ಕ್ಕೆ194 (ಯಶ್ ಕೊಠಾರಿ 95, ಕುನಾಲ್ ಸಿಂಗ್ 28, ಕರಣ್ ಲಾಂಬಾ ಔಟಾಗದೆ 37, ಶಹಬಾಜ್ ನದೀಂ 48ಕ್ಕೆ3). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.