: ಫೀಲ್ಡಿಂಗ್ ವೇಳೆ ಪರಸ್ಪರ ಡಿಕ್ಕಿ ಹೊಡೆದ ಲಂಕಾ ಆಟಗಾರರಿಗೆ ಗಾಯ ತಿರುವನಂತಪುರ: ಭಾರತ ವಿರುದ್ಧ ಇಲ್ಲಿನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದ ವೇಳೆ ಶ್ರೀಲಂಕಾದ ಆಟಗಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಂಕಾ ಫೀಲ್ಡಿಂಗ್ ವೇಳೆ ಘಟನೆ ನಡೆದಿದೆ. ವಿರಾಟ್ ಕೊಹ್ಲಿ ಅವರು ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ತಡೆಗಟ್ಟಲು ಯತ್ನಿಸಿದ ಜೆಫ್ರಿ ವಾಂಡರ್ಸೆ ಮತ್ತು ಆಶನ್ ಭಂಡಾರ ಪರಸ್ಪರ ಡಿಕ್ಕಿ ಹೊಡೆದು ಗಾಯಗೊಂಡರು. ಇದನ್ನೂ ಓದಿ: : ದಾಖಲೆ ಅಂತರದ ಜಯದೊಂದಿಗೆ ಲಂಕಾ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಭಾರತ ಇದರಿಂದಾಗಿ ಪಂದ್ಯ ಅಲ್ಪ ಹೊತ್ತು ಸ್ಥಗಿತಗೊಂಡಿತ್ತು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ಶ್ರೀಲಂಕಾದ ಫಿಸಿಯೋ ತುರ್ತು ನೆರವನ್ನು ಒದಗಿಸಿದರು. ಬಳಿಕ ಸ್ಟ್ರೆಚರ್ ಮೂಲಕ ಆಟಗಾರರನ್ನು ಕರೆದೊಯ್ಯಲಾಯಿತು. ಈ ವೇಳೆ ವಿರಾಟ್ ಕೊಹ್ಲಿ ಅವರು ಶ್ರೀಲಂಕಾದ ದಸುನ್ ದಸುನ್ ಶನಕಾ ಬಳಿ ತೆರಳಿ ಲಂಕಾದ ಆಟಗಾರರ ಆರೋಗ್ಯ ಸ್ಥಿತಿಯ ಕುರಿತು ವಿಚಾರಿಸಿದರು. ಬಳಿಕ ಟ್ವೀಟ್ ಮಾಡಿದ ಶ್ರೀಲಂಕಾ ಕ್ರಿಕೆಟ್, ಕಂಕಷನ್ ನಿಯಮದಂತೆ ಜೆಫ್ರಿ ವಾಂಡರ್ಸೆ ಬದಲಿ ಸ್ಥಾನವನ್ನು ದುನಿತ್ ವೆಳಾಲಗೆ ತುಂಬಿದರು ಎಂದು ತಿಳಿಸಿದೆ. ../JiDc0ssWmK 🚨 # - . ' . . ../dCdWg64rbr ../1jLifE3CfU ../iohqJOc0jH ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.