ದ್ವಿಶತಕ ಗಳಿಸಿಯೂ ತಂಡದಲ್ಲಿ ಸ್ಥಾನವಿಲ್ಲ - ರೋಹಿತ್‌ಗೆ ಇಶಾನ್ ಹೇಳಿದ್ದೇನು? ಹೈದರಾಬಾದ್: ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಚೊಚ್ಚಲ ದ್ವಿಶತಕ ಗಳಿಸಿದ್ದ ಇಶಾನ್ ಕಿಶನ್ ಅವರಿಗೆ ಬಳಿಕದ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲೂ ಅವಕಾಶ ವಂಚಿತರಾದರು. ಕೊನೆಗೂ ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡರು.\ ಇದನ್ನೂ ಓದಿ: | ಬ್ರೇಸ್‌ವೆಲ್ ಹೋರಾಟ ವ್ಯರ್ಥ: ಭಾರತಕ್ಕೆ ರೋಚಕ ಗೆಲುವು ಇದೇ ಪಂದ್ಯದಲ್ಲಿ ಶುಭಮನ್ ಗಿಲ್ ಸಹ ಚೊಚ್ಚಲ ದ್ವಿಶತಕ ಬಾರಿಸಿದ್ದರು. ಇದರೊಂದಿಗೆ ದ್ವಿಶತಕ ಬಾರಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರೊಂದಿಗೆ ಎಲೈಟ್ ಕ್ಲಬ್‌ಗೆ ಗಿಲ್ ಕೂಡ ಸೇರ್ಪಡೆಗೊಂಡರು. 1⃣ 3️⃣ , & @ImRo45, @ishankishan51 & @ 🎤 😀 - @ 🎥 🔽 # | # ://./rD2URvFIf9 ../ ಪಂದ್ಯದ ಬಳಿಕ ಗಿಲ್ ಹಾಗೂ ಇಶಾನ್ ಅವರನ್ನು ನಾಯಕ ರೋಹಿತ್ ಸಂದರ್ಶನ ನಡೆಸಿದರು. ದ್ವಿಶತಕ ಗಳಿಸಿದ ಬಳಿಕವೂ ನೀವು ಏಕೆ ಮೂರು ಪಂದ್ಯಗಳಲ್ಲಿ ಆಡಲಿಲ್ಲ ಎಂದು ಇಶಾನ್‌‌ರನ್ನು ಪ್ರಶ್ನಿಸುವ ಮೂಲಕ ರೋಹಿತ್ ಕಾಲೆಳೆಯಲು ಪ್ರಯತ್ನಿಸಿದರು. ಇದಕ್ಕೆ ತಕ್ಷಣವೇ ಉತ್ತರಿಸಿದ ಇಶಾನ್, ನೀವೇ ಅಲ್ಲವೇ ಕಪ್ತಾನ ರೋಹಿತ್ ಭಾಯ್? ಎಂದು ಉತ್ತರಿಸಿದರು. ಈ ವೇಳೆ ಮೂವರಿಗೂ ನಗು ತಡೆಯಲು ಸಾಧ್ಯವಾಗಲಿಲ್ಲ. ಈ ಸನ್ನಿವೇಶ ನಾಯಕ ಮತ್ತು ಆಟಗಾರರ ನಡುವಣ ಉತ್ತಮ ಒಡನಾಟಕ್ಕೆ ಸಾಕ್ಷಿಯಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.