' U19 T20 | ಸೂಪರ್ ಸಿಕ್ಸ್ ಹಂತಕ್ಕೆ ಭಾರತ ಬೆನೊನಿ, ದಕ್ಷಿಣ ಆಫ್ರಿಕಾ: ಮನ್ನತ್ ಕಶ್ಯಪ್‌ (12ಕ್ಕೆ 4) ಬೌಲಿಂಗ್ ಬಲದಿಂದ ಭಾರತ ತಂಡದವರು 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಸಿಕ್ಸ್ ಹಂತ ತಲು‍ಪಿದರು. ಬುಧವಾರ ಇಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ 83 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಮಣಿಸಿತು. ಸಂಕ್ಷಿಪ್ತ ಸ್ಕೋರ್ ಭಾರತ: 20 ಓವರ್‌ಗಳಲ್ಲಿ 4ಕ್ಕೆ 149 (ಗೊಂಗಾಡಿ ತ್ರಿಶಾ 57, ರಿಚಾ ಘೋಷ್‌ 33, ಶ್ವೇತಾ ಶೆರಾವತ್‌ ಔಟಾಗದೆ 31; ಕ್ಯಾಥರೀನ್ ಫ್ರೆಸರ್ 31ಕ್ಕೆ 2, ನಯ್ಮಾ ಶೇಖ್‌ 32ಕ್ಕೆ 1, ಒರ್ಲಾ ಮೊಂಟ್‌ಗೊಮೆರಿ 28ಕ್ಕೆ 1). ಸ್ಕಾಟ್ಲೆಂಡ್‌: 13.1 ಓವರ್‌ಗಳಲ್ಲಿ 66 (ಐಸ್ಲಾ ಲಿಸ್ಟರ್ 14, ಡಾರ್ಸಿ ಕಾರ್ಟರ್ 24; ಮನ್ನತ್ ಕಶ್ಯಪ್‌ 12ಕ್ಕೆ 4, ಅರ್ಚನಾ ದೇವಿ 14ಕ್ಕೆ 3, ಸೋನಮ್ ಯಾದವ್‌ 1ಕ್ಕೆ 2). ಫಲಿತಾಂಶ: ಭಾರತ ತಂಡಕ್ಕೆ 83 ರನ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.