ಮಲಾನ್‌ ಶತಕ: ಇಂಗ್ಲೆಂಡ್‌ಗೆ ಸರಣಿ ಲಂಡನ್‌ (ರಾಯಿಟರ್ಸ್): ಡೇವಿಡ್‌ ಮಲಾನ್‌ (127 ರನ್) ಅವರ ಶತಕ ಮತ್ತು ಮೊಯೀನ್‌ ಅಲಿ (50ಕ್ಕೆ 4) ತೋರಿದ ಕೈಚಳಕದ ನೆರವಿನಿಂದ ಇಂಗ್ಲೆಂಡ್‌ ತಂಡ, ನಾಲ್ಕನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 100 ರನ್‌ಗಳಿಂದ ಮಣಿಸಿತು. ಈ ಗೆಲುವಿನೊಂದಿಗೆ ಜೋಸ್‌ ಬಟ್ಲರ್‌ ಬಳಗ ಸರಣಿಯನ್ನು 3–1 ರಿಂದ ಜಯಿಸಿತು. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 311 ರನ್‌ ಗಳಿಸಿತು. ಮಲಾನ್ 114 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 127 ರನ್‌ ಕಲೆಹಾಕಿದರು. ಬಟ್ಲರ್‌ 36 ರನ್‌ ಗಳಿಸಿದರು. ಮೊಯೀನ್‌ ಸ್ಪಿನ್‌ ದಾಳಿಗೆ ಪರದಾಡಿದ ನ್ಯೂಜಿಲೆಂಡ್‌, 38.2 ಓವರ್‌ಗಳಲ್ಲಿ 211 ರನ್‌ಗಳಿಗೆ ಅಲೌಟಾಯಿತು. ರಚಿನ್ ರವೀಂದ್ರ (61) ಮತ್ತು ಹೆನ್ರಿ ನಿಕೊಲ್ಸ್ (41) ಮಾತ್ರ ಅಲ್ಪ ಹೋರಾಟ ತೋರಿದರು. ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 311 (ಡೇವಿಡ್‌ ಮಲಾನ್ 127, ಜೊ ರೂಟ್‌ 29, ಜೋಸ್‌ ಬಟ್ಲರ್‌ 36, ಲಿಯಾಮ್‌ ಲಿವಿಂಗ್‌ಸ್ಟೋನ್ 28, ರಚಿನ್‌ ರವೀಂದ್ರ 60ಕ್ಕೆ 4, ಮ್ಯಾಟ್‌ ಹೆನ್ರಿ 69ಕ್ಕೆ 2, ಡೆರಿಲ್‌ ಮಿಚೆಲ್‌ 40ಕ್ಕೆ 2) ನ್ಯೂಜಿಲೆಂಡ್ 38.2 ಓವರ್‌ಗಳಲ್ಲಿ 211 (ವಿಲ್‌ ಯಂಗ್ 24, ಹೆನ್ರಿ ನಿಕೊಲ್ಸ್ 41, ರಚಿನ್‌ ರವೀಂದ್ರ 61, ಮೊಯೀನ್‌ ಅಲಿ 50ಕ್ಕೆ 4, ಡೇವಿಡ್‌ ವಿಲಿ 28ಕ್ಕೆ 1, ಸ್ಯಾಮ್‌ ಕರನ್ 21ಕ್ಕೆ 1) ಫಲಿತಾಂಶ: ಇಂಗ್ಲೆಂಡ್‌ಗೆ 100 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.