: 9ನೇ ಟೆಸ್ಟ್ ಶತಕ - ರೋಹಿತ್ ದಾಖಲೆ; ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ನಾಗಪುರ: ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಒಂಬತ್ತನೇ ಶತಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಟೀಮ್ ಇಂಡಿಯಾದ ಮೊದಲ ಕಪ್ತಾನ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಅಮೋಘ ಶತಕ ಗಳಿಸಿದರು. ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ವಿಕೆಟ್‌ನ ಮತ್ತೊಂದು ತುದಿಯಿಂದ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ರೋಹಿತ್, ಭಾರತವನ್ನು ಅಪಾಯದಿಂದ ಪಾರು ಮಾಡಿದರು. , & ! 😊 👏 ! 👍 👍 , @ImRo45 🙌🙌 ▶️ ://./ # | # | @ ../gW0NfRQvLY ಇನ್ನಿಂಗ್ಸ್ ಮುನ್ನಡೆ... ರೋಹಿತ್ ಶತಕದ ಬಲದೊಂದಿಗೆ ಭಾರತ ತಂಡವು ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ. ಟೀ ವಿರಾಮದ ವೇಳೆಗೆ ಭಾರತ ತಂಡವು 80 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ. ಈ ಮೊದಲ ಮೊದಲ ಇನ್ನಿಂಗ್ಸ್‌ನಲ್ಲಿ 49 ರನ್‌ಗಳ ಮುನ್ನಡೆ ಗಳಿಸಿದೆ. ರೋಹಿತ್ 118* ಹಾಗೂ ರವೀಂದ್ರ ಜಡೇಜ 34* ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರೋಹಿತ್ ಸಾಧನೆ... ನಾಯಕನಾಗಿ ಎಲ್ಲ ಮೂರು ಮಾದರಿಗಳಲ್ಲಿ ಶತಕ ಸಾಧನೆ ಮಾಡಿರುವ ರೋಹಿತ್ ಶರ್ಮಾ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ದಕ್ಷಿಣ ಆಫ್ರಿಕಾದ ಫಫ್ ಡು ಪ್ಲೆಸಿ ಮತ್ತು ಪಾಕಿಸ್ತಾನದ ಬಾಬರ್ ಆಜಂ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. 🔓 👏 🙌@ImRo45 , & T20Is # 🔝 ../ ಕೊಹ್ಲಿ, ಪೂಜಾರ ವೈಫಲ್ಯ... ಈ ನಡುವೆ ಚೇತೇಶ್ವರ ಪೂಜಾರ (7) ಹಾಗೂ ವಿರಾಟ್ ಕೊಹ್ಲಿ (12) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿರುವ ಸೂರ್ಯಕುಮಾರ್ ಯಾದವ್ 8 ರನ್ ಗಳಿಸಿ ಔಟ್ ಆಗಿ ನಿರಾಸೆ ಅನುಭವಿಸಿದರು. ಆರ್. ಅಶ್ವಿನ್ 23 ಹಾಗೂ ಕೆ.ಎಲ್. ರಾಹುಲ್ 20 ರನ್ ಗಳಿಸಿ ಔಟ್ ಆದರು. ಮರ್ಫಿಗೆ ನಾಲ್ಕು ವಿಕೆಟ್... ಪದಾರ್ಪಣೆ ಪಂದ್ಯದಲ್ಲೇ ನಾಲ್ಕು ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ಟಾಡ್ ಮರ್ಫಿ, ಭಾರತವನ್ನು ಕಾಡಿದರು. 5⃣0⃣- ! 🤝 - @ImRo45 & @ 👌 👌# 220. ▶️ ://./ # | @ ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.